ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮೇ 1ರಿಂದ ಸಿರಿಗೆರೆ ಶಾಖಾ ಮಠದಲ್ಲಿ ಜೀರ್ಣೋದ್ಧಾರ ಕಾರ್ಯ

Mainashree
Updated On : 27 Apr 2014, 12:06 pm

ಹಾರನಹಳ್ಳಿ: ಇಲ್ಲಿಗೆ ಸಮೀಪದ ನಾಗೇನಹಳ್ಳಿಗ್ರಾಮದ ತರಳಬಾಳು ಜಗದ್ಗುರು ಬೃಹನ್ಮಠ ಸಿರಿಗೆರೆ ಶಾಖಾ ಮಠದಲ್ಲಿ ಮಹದೇಶ್ವರ ಸ್ವಾಮಿ ನೂತನ ದೇವಾಲಯ ಜೀರ್ಣೋದ್ಧಾರ ಹಾಗೂ ನೂತನ ಗೋಪುರ ಕಳಶ ಸ್ಥಾಪನೆ ಧಾರ್ಮಿಕ ಸಮಾರಂಭ ಕಾರ್ಯಕ್ರಮ ಮೇ 1 ರಿಂದ ಮೇ 3 ರವರೆಗೆ ನಡೆಯಲಿದೆ.
ಮೇ 2 ರಂದು ಬಸವ ಜಯಂತಿಯಂದು ಬ್ರಾಹ್ಮಿ ಲಗ್ನದಲ್ಲಿ  ರುದ್ರಮುನಿ ಸ್ವಾಮಿ ಸಾನ್ನಿಧ್ಯದಲ್ಲಿ ಮಹದೇಶ್ವರ ಸ್ವಾಮಿ ಪ್ರತಿಷ್ಠಾಪನೆ ಶರಣ ವಿರೂಪಕ್ಷಯ್ಯ ಅವರಿಂದ  ಗೋಪುರ ಕಳಶ ಸ್ಥಾಪನೆ ರುದ್ರಾಭೀಷೇಕ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ.
ಮೇ 3 ರಂದು ಮಧ್ಯಾಹ್ನ 3ಕ್ಕೆ ಸಿರಿಗೆರೆ ತರಳಬಾಳು ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ, ಮಾಡಾಳು ನಿರಂಜನ ಪೀಠದ ರುದ್ರಮುನಿ ಸ್ವಾಮೀಜಿ, ಚಿಕ್ಕಮಗಳೂರು ಬಸವಮಂದಿರದ ಜಯಬಸವಾನಂದ ಸ್ವಾಮೀಜಿ ಉಪಸ್ಥಿತಿಯಲ್ಲಿ ಧಾರ್ಮಿಕ ಸಮಾರಂಭ ಹಾಗೂ ಸರ್ವ ಶರಣ ಸಮ್ಮೇಳನ ನಡಯಲಿದೆ.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವ ಬಿ. ಶಿವರಾಂ, ಶಾಸಕರಾದ ವೈ.ಎನ್.ರುದ್ರೇಶಗೌಡ, ಕೆ.ಎಂ.ಶಿವಲಿಂಗೇಗೌಡ, ಜಿಪಂ ಸದಸ್ಯರಾದ ಹುಚ್ಚೇಗೌಡ, ಲಕ್ಷಣ್, ತಾಲೂಕು ಸಾಧು ವೀರಶೈವ ಸಂಘದ ಅಧ್ಯಕ್ಷ ಹಿರಿಯೂರು ರೇವಣ್ಣ, ಡಿವೈಎಸ್‌ಪಿ ಐ.ಜಿ. ಮಂಜುನಾಥ್  ಮತ್ತಿತರರು ಭಾಗವಹಿಸುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement