951 ಪ್ರಕರಣಗಳ ರಾಜಿ ಸಂಧಾನ
ಬೇಲೂರು: ಲೋಕ ಅದಾಲತ್ನ ರಾಜಿ ಸಂಧಾನದ ಮೂಲಕ ಬೇಲೂರು ನ್ಯಾಯಲಯದಲ್ಲಿ 951 ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ ಎಂದು ಹಿರಿಯ ನ್ಯಾಯಾದೀಶ ಇ. ರಾಜೀವ್ ಗೌಡ ತಿಳಿಸಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬೇಲೂರು ಕಾನೂನು ಸೇವೆಗಳ ಸಮಿತಿ, ತಾಲೂಕು ವಕೀಲರ ಸಂಘ ಇವರ ಸಂಪೂರ್ಣ ಬೆಂಬಲದೊಂದಿಗೆ ಹಾಗೂ ಅವರ ಸಲಹೆ ಮಾರ್ಗ ದರ್ಶನೊಂದಿಗೆ 951 ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ ಎಂದ ಅವರು, ಕಿರಿಯ ನ್ಯಾಯಾಲಯದಲ್ಲಿ 690 ಪ್ರಕರಣಗಳು, ಹಿರಿಯ ನ್ಯಾಯಾಲಯದಲ್ಲಿ 261 ಪ್ರಕರಣಗಳು ಇತ್ಯರ್ಥಗೊಂಡಿವೆ ಎಂದರು.
ರು. 25 ಲಕ್ಷಕ್ಕೂ ಹೆಚ್ಚು ಪರಿಹಾರ: ಇವುಗಳಲ್ಲಿ ಬೇಲೂರು ಕೆನರಾ ಬ್ಯಾಂಕ್, ಹೆಬ್ಬಾಳು ಕಾಪೋರೇಷನ್ ಬ್ಯಾಂಕ್, ಮೈಸೂರು ಬ್ಯಾಂಕ್ಗಳಲ್ಲಿನ ಸಾಲಗಾರರ ಮೇಲಿನ ಪ್ರಕರಣಗಳನ್ನು ರಾಜಿ ಸಂಧಾನ ಮಾಡುವ ಮೂಲಕ ಸುಮಾರು 146 ಪ್ರಕರಣದಿಂದ ರು. 25 ಲಕ್ಷಕ್ಕೂ ಅಧಿಕ ಸಾಲವನ್ನು ಬ್ಯಾಂಕ್ಗೆ ನೀಡಿಸುವಲ್ಲಿ ನ್ಯಾಯಾಲಯ ಬಹು ಮುಖ್ಯ ಪಾತ್ರ ವಹಿಸಿದೆ. ಅಲ್ಲದೇ ಮುಖ್ಯ ಅಪಾಘತದಲ್ಲಿನ ಸುಮಾರು 31 ಪ್ರಕರಣದಲ್ಲಿ ರಾಜಿ ಮೂಲಕ ರು. 23 ಲಕ್ಷಕ್ಕೂ ಹೆಚ್ಚು ಪರಿಹಾರ ನೀಡಲಾಗಿದೆ ಎಂದರು.
ಇದಕ್ಕೆ ಪ್ರಮುಖ ಕಾರಣ ನಮ್ಮಲ್ಲಿನ ವಕೀಲರ ಸಹಕಾರ ಮುಖ್ಯವೆಂದ ಅವರು ಬೇಲೂರು ನ್ಯಾಯಾಲಯ ಲೋಕ ಅಧಾಲತ್ಣನಲ್ಲಿ 951 ಪ್ರಕರಣಗಳನ್ನು ಇತ್ಯರ್ಥ ಮಾಡುವ ಮೂಲಕ ಜಿಲ್ಲೆಯಲ್ಲಿ ಎರಡನೇ ಸ್ಥಾನ ಪಡೆದಿದೆ ಎಂದರು.
ಈ ಸಂದರ್ಭದಲ್ಲಿ ಕಿರಿಯ ನ್ಯಾಯಾಧೀಶೆ ಶರ್ಮಿಳಾ, ತಾಲೂಕು ವಕೀಲ ಸಂಘದ ಅಧ್ಯಕ್ಷ ಲಿಂಗೇಶ್, ಕಾರ್ಯದರ್ಶಿ ಜಿ.ಟಿ. ಪ್ರಕಾಶ್, ಉಪಾಧ್ಯಕ್ಷ ರಾಜೇಗೌಡ ಇದ್ದರು.