ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕ್ರಮ ಕೈಗೊಂಡರೆ ಉಗ್ರ ಪ್ರತಿಭಟನೆ

Mainashree
Updated On : 27 Apr 2014, 11:27 am

ಸಕಲೇಶಪುರ: ಶೃಂಗೇರಿ ಶೂಟ್ ಔಟ್ ಪ್ರಕರಣದಲ್ಲಿ ಎ.ಎನ್.ಎಫ್ ಯೋಧನ ವಿರುದ್ಧ ಸರ್ಕಾರ ಕ್ರಮ ಕೈಗೊಂಡರೆ ಬಜರಂಗದಳದ ವತಿಯಿಂದ ಜಿಲ್ಲಾವ್ಯಾಪ್ತಿ ಹೋರಾಟ ಮಾಡಲಾಗುವುದೆಂದು ಬಜರಂಗದಳದ ಜಿಲ್ಲಾ ಸಂಚಾಲಕ ವಿಜಯ್ ಕುಮಾರ್ ಹಾಗೂ ತಾಲೂಕು ಸಂಚಾಲಕ ಧರ್ಮೇಶ್ ತಿಳಿಸಿದ್ದಾರೆ.
ಇತ್ತೀಚೆಗೆ ಶೃಂಗೇರಿಯ ಚೆಕ್ ಪೋಸ್ಟ್ ಒಂದರ ಬಳಿ ಎ.ಎನ್.ಎಫ್ ಯೋಧರು ರಾತ್ರಿ ವೇಳೆ ವಾಹನಗಳ ತಪಾಸಣೆ ಮಾಡುವಾಗ ಕಬೀರ್ ಮತ್ತು ಸಂಗಡಿಗರು ತಮ್ಮ ವಾಹನದಲ್ಲಿ ಅಕ್ರಮ ಗೋ ಸಾಗಿಸುವಾಗಿ ಸಿಕ್ಕಿಹಾಕಿಕೊಂಡಿದ್ದರು. ಈ ಸಂದರ್ಭದಲ್ಲಿ ಕಬೀರ್ ಮತ್ತು ಸಂಗಡಿಗರು ಏಕಾಏಕಿ ಸ್ಥಳದಿಂದ ಓಡಿಹೋಗಲು ಯತ್ನಿಸಿದ್ದಾರೆ. ಇದರಿಂದ ಗಾಬರಿಗೊಂಡ ಎ.ಎನ್.ಎಫ್ ಯೋಧರು ಕಬೀರ್ ಮತ್ತು ಸಂಗಡಿಗರು ನಕ್ಸಲರಾಗಿರ ಬಹುದೆಂದು ಅನುಮಾನ ಬಂದು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ್ದಾರೆ.
ಆದರೂ ಕಬೀರ್ ಮತ್ತು ಸಂಗಡಿಗರು ಅಲ್ಲಿ ನಿಲ್ಲದೇ ಪರಾರಿಯಾಗಲು ಯತ್ನಿಸಿದಾಗ ಎ.ಎನ್.ಎಫ್ ಯೋಧರು ಮತ್ತೊಮ್ಮೆ ಗುಂಡು ಹಾರಿಸಿದ್ದು, ಅವರು ಹೊಡೆದ ಗುಂಡು ಕಬೀರ್‌ಗೆ ತಗುಲಿ, ಆತ ಸ್ಥಳದಲ್ಲಿ ಮೃತಪಟ್ಟಿದ್ದಾನೆ.  
ಟೀಕೆ: ಮೃತ ಕಬೀರ್ ವಿರುದ್ಧ ಮಂಗಳೂರು, ಸೂರತ್‌ಕಲ್ ಹಾಗೂ ನಾನಾ ಪೊಲೀಸ್ ಠಾಣೆಗಳಲ್ಲಿ ಗೋ ಕಳ್ಳತನ ಹಾಗೂ ಅಕ್ರಮ ಗೋ ಸಾಗಾಣಿಕಾ ಸಂಭಂಧ ಹಲವಾರು ಪ್ರಕರಣಗಳು ದಾಖಲಾಗಿದೆ ಎಂದು ಹೇಳಿದರು. ಆದರೆ, ಈ ವಿಷಯವನ್ನು ಮುಂದಿಟ್ಟುಕೊಂಡು ಕೆಲವು ದೇಶದ್ರೋಹ ಸಂಘಟನೆಗಳು ಎ.ಎನ್.ಎಫ್ ಯೋಧರ ಮಾನಸಿಕ ಸ್ಥೈರ್ಯ ಕುಗ್ಗಿಸಲು ಹೊರಟಿವೆ ಎಂದು ಟೀಕಿಸಿದರು.
ಈಗಾಗಲೇ ಸರ್ಕಾರ ಇಂತಹ ಸಂಘಟನೆಗಳ  ಪ್ರತಿಭಟನೆಗೆ ಮಣಿದು ಮೃತ ಕಬೀರ್ ಕುಟುಂಬಕ್ಕೆ ಪರಿಹಾರ ಹಣ ನೀಡಿದೆ.
ಸರ್ಕಾರ ಇನ್ನು ಒತ್ತಡಕ್ಕೆ ಮಣಿದು ಎ.ಎನ್.ಎಫ್ ಯೋಧರ ಮೇಲೆ ಕ್ರಮಕ್ಕೆ ಮುಂದಾದರೆ ಬಜರಂಗದಳದ ವತಿಯಿಂದ ಜಿಲ್ಲೆ ಹಾಗೂ ತಾಲೂಕಿನಾದ್ಯಾಂತ ಉಗ್ರ ಹೋರಾಟ ಮಾಡಲಾಗುವುದೆಂದು ಎಚ್ಚರಿಸಿದ್ದಾರೆ.
ಪ್ರತಿಭಟನೆಯಲ್ಲಿ ಆರೋಪಿ: ಟೀಕೆ
ಸಕಲೇಶಪುರ: ಎನ್‌ಕೌಂಟರ್‌ನಲ್ಲಿ ಸಾವಿಗೀಡಾದ ಕಬೀರ್ ಪರವಾದ ಪ್ರತಿಭಟನೆಯಲ್ಲಿ ಕೊಲೆ ಆರೋಪ ಹೊತ್ತಿರುವ ರೌಡಿ ಶೀಟರ್ ವ್ಯಕ್ತಿ ಇದ್ದರು ಎಂದು ಆರೋಪಿಸಲಾಗಿದೆ.
ಪಿ.ಎಫ್.ಐ ಸಂಘಟನೆಯನ್ನು ಮೂಲಭೂತವಾದಿ ಎಂದು ಜರೆಯುವ ಮಾರ್ಕ್ಸ್‌ವಾದಿ ಕಮುನಿಸ್ಟ್ ಪಾರ್ಟಿ ಎಂದಿಗೂ ಪಿಎಫ್ ಐ ಜೊತೆ ಕೈ ಜೋಡಿಸುವುದಿಲ್ಲ. ಆದರೆ ಕ್ರಿಮಿನಲ್ ಆರೋಪ ಹೊತ್ತ ವ್ಯಕ್ತಿಗೆ ಸಿಪಿಎಂ ಮುಖವಾಡ ತೊಡಿಸಿ, ಪಿಎಫ್‌ಐ ಪ್ರತಿಭಟನೆಯಲ್ಲಿ ಬಳಸಿಕೊಂಡಿದೆ ಎಂದು ಕೆಲವು ಸಂಘಟನೆಗಳ ಮುಖಂಡರು ಟೀಕಿಸಿದ್ದಾರೆ.
ತಾಲೂಕು ಬಜರಂಗದಳ ಸಂಚಾಲಕ ಧರ್ಮೇಶ್ ಹೇಳಿಕೆ ನೀಡಿ, ಪಿ.ಎಫ್.ಐ ಸಂಘಟನೆ ಎ.ಎನ್.ಎಫ್ ಯೋಧರ ಮಾನಸಿಕ ಸ್ಥೈರ್ಯ ಕುಗ್ಗಿಸಲು ಯತ್ನಿಸಲಾಗುತ್ತಿದೆ.  ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಯನ್ನು ಬಳಸಿಕೊಂಡಿರುವುದು ಹಾಸ್ಯಾಸ್ಪದವಾಗಿದೆ ಎಂದು ಟೀಕಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement