ಶಿಕ್ಷಕರ ಅರ್ಹತಾ ಪರೀಕ್ಷೆಗೆ ಅರ್ಹರಿಂದ ಅರ್ಜಿ ಆಹ್ವಾನ
ಹಾಸನ: ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳಲ್ಲಿ ಶಿಕ್ಷಕರಾಗಿ ಸೇರಬಯಸುವವರು ಜೂ. 1ರಂದು ನಡೆಯಲಿರುವ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ಕಡ್ಡಾಯವಾಗಿ ಬರೆದು ಅರ್ಹತೆ ಗಳಿಸಬೇಕಾಗಿದೆ.
ಈ ಪರೀಕ್ಷೆಗೆ ಶೇಕಡ 50 ಅಂಕಗಳೊಂದಿಗೆ ಪಿಯುಸಿ ಪಾಸಾಗಿರಬೇಕು. ಶೇ. 50 ಅಂಕಗಳೊಂದಿಗೆ ಬಿ.ಎ, ಬಿ.ಎಸ್ಸಿ ಅಥವಾ ಡಿ.ಇಡಿ ಅಥವಾ ಬಿ.ಇಡಿ ಪಾಸಾಗಿರಬೇಕು.
ಅರ್ಹರು ಮೇ 3 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಜಾಲತಾಣ ಣಢಿಢಿಢಿ. ಝ್ಛ್ಟ್ಟಟಜಜ್ಡ್ಛಛಡ್ಝ್ಟಿಟಿ.್ಞಛ್ಠ.ಟ್ಝ್ಛಿ.್ಝಟಿ. ಅರ್ಜಿ ಶುಲ್ಕ ಕೇವಲ 1 ಪತ್ರಿಕೆ ಬರೆಯಬೇಕಾದವರಿಗೆ ರು. 500, ಪ.ಜಾ., ಪ.ಪಂ., ವಿಚೆ ಅಭ್ಯರ್ಥಿಗಳಿಗೆ ರು. 250 ಮಾತ್ರ, 2 ಪತ್ರಿಕೆಗಳನ್ನು ಬರೆಯಬೇಕಾದವರು ರು. 800 ಪಜಾ, ಪ.ಪಂ., ವಿಚೇ ಅಭ್ಯರ್ಥಿಗಳಿಗೆ ರು. 400 ಪಾವತಿಸಬೇಕಿದೆ.
ಆಯ್ಕೆಯ ವಿಧಾನ: 1ರಿಂದ 5ನೇ ತರಗತಿಗಳಿಗೆ ಶಿಕ್ಷಕರಾಗ ಬಯಸಯವವರು ಮೊದಲ ಪತ್ರಿಕೆಗೆ ಮಾತ್ರ ಉತ್ತರಿಸಿದರೆ ಸಾಕು. 1ರಿಂದ 8ನೇ ತರಗತಿಗಳಿಗೆ ಶಿಕ್ಷಕರಾಗ ಬಯಸಯವವರು 2 ಪ್ರತಿಕೆಗಳಿಗೂ ಉತ್ತರಿಸಬೇಕಾಗುತ್ತದೆ. ಪ್ರತಿ ಪತ್ರಿಕೆಗೂ 150 ಅಂಕಗಳು. ಬಹು ಆಯ್ಕೆ ವಿಧಾನದಲ್ಲಿರುತ್ತದೆ. 2 ಪತ್ರಿಕೆಗಳಿಗೂ ಉತ್ತರಿಸಬೇಕಾಗಿದೆ. ಪ್ರತಿ ಪತ್ರಿಕೆಗೂ 150 ಅಂಕಗಳು. ಬಹು ಆಯ್ಕೆವಿಧಾನದಲ್ಲಿರುತ್ತದೆ.
2 ಪತ್ರಿಕೆಗಳಲ್ಲಿ 5 ಭಾಗಗಳಿರುತ್ತವೆ. ಶಿಶು ವಿಜ್ಞಾನ ವಿಕಸನ, ಭಾಷೆ-1 (ಕನ್ನಡ, ಉರ್ದು, ಮರಾಠಿ, ತಮಿಳು, ತೆಲುಗು, ಮಲಯಾಳಂ, ಭಾಷೆ-2 (ಆಂಗ್ಲಭಾಷೆ), ಗಣಿತ (5) ಪರಿಸರ ಅಧ್ಯಯನ (ವಿಜ್ಞಾನ ಮತ್ತು ಸಮಾಜ ವಿಜ್ಞಾನ) ಪ್ರತಿ ಭಾಗಕ್ಕೂ 30 ಪ್ರಶ್ನೆಗಳು 30 ಅಂಕಗಳು. ಪ್ರಶ್ನೆಗಳು ಅವರವರ ಶಿಕ್ಷಣದಮಟ್ಟದ್ದಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ?: ಲಿಖಿತ ಪರೀಕ್ಷೆಗೆ ಸಿದ್ಧತೆ ಹೇಗೆ, ಈ ಎಲ್ಲಾ ಮಾಹಿತಿ ಮಾರ್ಗದರ್ಶನ ಸಲಹೆಗಾಗಿ ಹಾಸನದ ಕೃಷಿಕ್ ಸರ್ವೋದಯ ಫೌಂಡೇಷನ್‌ನನ್ನು ಖುದ್ದಾಗಿ ಅಥವಾ ಚರವಾಣಿ 98454 93336 ಮೂಲಕ ಸಂಪರ್ಕಿಸಿ ಪಡೆದುಕೊಳ್ಳಬಹುದಾಗಿದೆ.