ಉಲ್ಬಣಿಸಿದ ಕುಡಿವ ನೀರಿನ ಸಮಸ್ಯೆ
ಸಕಲೇಶಪುರ: ಬಿಸಿಲು ಬೇಗೆ ಹೆಚ್ಚುತ್ತಿರುವಂತೆ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ.
ಕಳೆದ ಹಲವು ದಿನಗಳಿಂದ ಅಶೋಕರಸ್ತೆ, ಆಜಾದ್ ರಸ್ತೆ, ಬ್ರಾಹ್ಮಣರ ಬೀದಿ, ಕುಶಾಲನಗರ ಸೇರಿದಂತೆ ಬಹುತೇಕ ಬಡಾವಣೆಗಳಿಗೆ ಕಳೆದ ಒಂದು ತಿಂಗಳಿನಿಂದ ಎರಡು ದಿನಗಳಿಗೊಮ್ಮೆ ಕೆಲವೆ ಗಂಟೆಗಳಕಾಲ ನೀರು ಬೀಡಲಾಗುತ್ತಿದೆ. ಇದರಿಂದ ಸ್ಥಳೀಯ ನಿವಾಸಿಗಳು ಸಮೀಪದ ಬಾವಿ, ಕೊಳವೆ ಬಾವಿಗಳ ಮೊರೆ ಹೋಗುತ್ತಿದ್ದಾರೆ. ಅಜಾದ್ ರಸ್ತೆಯ ನಿವಾಸಿಗಳು ಟ್ಯಾಂಕರ್ಗೆ ರು. 300 ಹಣ ನೀಡಿ ನೀರು ಪೂರೈಸಿಕೊಳ್ಳುತ್ತಿದ್ದರೆ. ಈ ಬಗ್ಗೆ ಪುರಸಬೆ ಅನಧಿಕೃತ ಮೂಲಗಳು ಪ್ರಕಾರ ಹೇಮಾವತಿ ನದಿಯಲ್ಲಿ ನೀರಿನ ಮೂಲ ಕಡಿಮೆಯಾಗಿದೆ. ನೀರು ಪೂರೈಸುವ ಮೋಟಾರ್ಗಳು ರಿಪೇರಿಗೊಳಪಡಬೇಕಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಬಗ್ಗೆ ಸ್ಪಷ್ಟನೆ ಪಡೆಯಲು ಪುರಸಭೆಯ ಅಭಿಯಂತರ ಚಂದ್ರಶೇಖರ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಮೊಬೈಲ್ ಕರೆ ಸ್ವೀಕರಿಸಲಿಲ್ಲ.