ಕೃಷಿ ನಿರ್ದೇಶಕರಿಗೆ ಕಟ್ಟುನಿಟ್ಟು ಸೂಚನೆ
ಮುಂಗಾರು ಹಂಗಾಮಿಗೆ ರಸಗೊಬ್ಬರದ ಬೇಡಿಕೆ ಮತ್ತು ರಾಜ್ಯದಿಂದ ಜಿಲ್ಲಾವಾರು ಹಂಚಿಕೆಯಾಗಿರುವ ನಾನಾ ರಸಗೊಬ್ಬರಗಳ ಸಪ್ಲೇ ಪ್ಲಾನ್‌ನಂತೆ (ಯೋಜಿತ ಸರಬರಾಜು ವಿವರ), ಕಾಪು ದಾಸ್ತಾನಿನ ಬಗ್ಗೆ, ರೇಲ್ವೆ ಯಾರ್ಡ್ ಗೂಡ್ ಶೆಡ್‌ನಲ್ಲಿ ಸಂಭವಿಸಬಹುದಾದ ಸಮಸ್ಯೆಗಳು, ಲಾರಿ ಟ್ರಾನ್ಸ್‌ಪೋರ್ಟೋಷನ್‌ನಲ್ಲಿ ಸಂಭವಿಸಬಹುದಾದ ಸಮಸ್ಯೆಗಳು, ಸಹಕಾರ ಸಂಘಗಳು ಮತ್ತು ಖಾಸಗಿ ಮಾರಾಟಗಾರರಿಗೆ ಅನುಪಾತದಲ್ಲಿ ರಸಗೊಬ್ಬರ ಹಂಚಿಕೆ, ಕುರಿತು, ತಂಬಾಕು ಬೆಳೆಗಳಿಗೆ ರಸಗೊಬ್ಬರ ಹಂಚಿಕೆ, ರಸಗೊಬ್ಬರದ ವಹಿವಾಟಿನ ಉಸ್ತುವಾರಿಯನ್ನು ತಾಲೂಕು ಸಹಾಯಕ ಕೃಷಿ ನಿರ್ದೇಶಕರು ಕೈಗೊಳ್ಳುವಂತೆ ತಿಳಿಸಿದರು. ಅಧಿಕಾರಿಗಳು ಪಾರದರ್ಶಕವಾಗಿ ಕೆಲಸ ಮಾಡುವಂತೆ ಸೂಚಿಸಿದ ಅವರು, ಸಹಾಯಕ ಕೃಷಿ ಅಧಿಕಾರಿಗಳು ಜಿಲ್ಲಾಧಿಕಾರಿಯವರ ಅನುಮತಿ ಇಲ್ಲದೆ ಕೇಂದ್ರಸ್ಥಾನ ಬಿಡದಂತೆ ನಿರ್ದೇಶನ ನೀಡಿದರು.