ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕೋಕೋಪೀಟ್ ಗೊಬ್ಬರ ಹೆಸರು ದುರ್ಬಳಕೆ

Mainashree
Updated On : 29 Apr 2014, 12:15 pm

ಮೈಸೂರು: ತಮ್ಮ ಸಂಸ್ಥೆಯ ಯಶಸ್ವಿನಿ ಕೋಕೋಪೀಟ್ ಕಂಪೋಸ್ಟ್ ಗೊಬ್ಬರ ಹೆಸರನ್ನು ನಕಲು ಮಾಡಿ ದುರ್ಬಳಕೆ ಮಾಡುತ್ತಿದ್ದಾರೆ ಎಂದು ಅಶ್ವಿನಿ ಅಗ್ರೋಟೆಕ್‌ನ ಮುಖ್ಯಸ್ಥ ಸಿ.ಎ.ಶೇಖರ್ ಆರೋಪಿಸಿದರು.
ಯಶಸ್ವಿನಿ ಅಗ್ರೋಟೆಕ್, ಅರಸೀಕೆರೆ ಎಂದು ಮಾತ್ರ ನಮೂದಿಸಿ ಯಶಸ್ವಿನಿ ಕೋಕೋಪೀಟ್ ನಕಲಿ ಗೊಬ್ಬರವನ್ನು ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ, ರಾವಂದೂರು ಭಾಗದಲ್ಲಿ ಮಾರಾಟ ಮಾಡಿದ್ದಾರೆ. ಆ ಕಂಪನಿಯು ಸರಿಯಾದ ವಿಳಾಸ ಸಹ ನೀಡಿಲ್ಲ. ಯಾವುದೇ ಪರವಾನಗಿ ಸಹ ಪಡೆಯದೇ, ನಮ್ಮ ಸಂಸ್ಥೆಯ ಗೊಬ್ಬರ ಹೆಸರನ್ನು ನಕಲು ಮಾಡಿದೆ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಯಶಸ್ವಿನಿ ಕೋಕೋಪೀಟ್ ಗೊಬ್ಬರದ ಬದಲಾಗಿ ನಕಲಿಯನ್ನು ರೈತರಿಗೆ ಮಾರಾಟ ಮಾಡಲಾಗಿದೆ. ಈ ಗೊಬ್ಬರ ಬಳಸಿದ ಅನೇಕ ರೈತರ ತಂಬಾಕು ಸಸಿ ಉತ್ತಮ ಬೆಳವಣಿಗೆ ಕಾಣಲಿಲ್ಲ. ಅಂತಹ ರೈತರು ಬದಲಿ ಸಸಿಗಳನ್ನು ಬೆಳೆಸಿದ್ದಾರೆ. ಒಂದು ತಿಂಗಳಿಂದ ನಕಲಿ ಗೊಬ್ಬರ ಮಾರಾಟವಾಗುತ್ತಿದೆ. ಹೀಗಾಗಿ ರೈತರು ಮಾರುಕಟ್ಟೆಯಲ್ಲಿ ಗೊಬ್ಬರ ಖರೀದಿಸುವಾಗ ಸಮಗ್ರ ಮಾಹಿತಿಯುಳ್ಳ ಮೂಟೆಗಳನ್ನು ಮಾತ್ರ ಖರೀದಿಸುವಂತೆ ಅವರು ಸಲಹೆ ನೀಡಿದರು.
ರೈತರಾದ ಮಕ್ಬೂಲ್ ಪಾಷ, ಅಬ್ದುಲ್, ಬಾಬು, ಸುರೇಶ್ ಇದ್ದರು. ಹೆಚ್ಚಿನ ಮಾಹಿತಿಗಾಗಿ ದೂ.08232- 233224 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement