ಮದ್ಯ ಮಾರಾಟ ನಿಷೇಧ
ಬಾಣಾವರ ಪಟ್ಟಣ ವ್ಯಾಪ್ತಿ ಹಾಗೂ ಅರಸೀಕರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎಲ್ಲಾ ಮದ್ಯದ ಅಂಗಡಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಏ.29ರ ಮಧ್ಯ ರಾತ್ರಿವರೆಗೆ ಮುಚ್ಚಿಸಿ ಮದ್ಯ ಮಾರಾಟ ಮಾಡದಂತೆ ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅನ್ಬುಕುಮಾರ್ ತಿಳಿಸಿದ್ದಾರೆ.
ಅರಸೀಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎಲ್ಲಾ ಬಗೆಯ ಮದ್ಯ ಹಾಗೂ ಉತ್ತೇಜಕ ನಿಷೆ ತರುವ ಅಮಲು ಪಾನೀಯಗಳನ್ನು ಸಂಗ್ರಹಿಸಿಡುವುದು, ಶೇಖರಿಸುವುದು, ಸೇರಿದಂತೆ ಎಲ್ಲಾ ರೀತೀಯ ಸರ್ಕಾರಿ ಸಾಮ್ಯದ ಹಾಗೂ ಖಾಸಗಿ ಅಂಗಡಿಗಳಲ್ಲಿ, ಕ್ಲಬ್‌ಗಳಲ್ಲಿ, ಡಾಬಾಗಳಲ್ಲಿ, ಬಾರುಗಳಲ್ಲಿ, ಸ್ಟಾರ್ ಹೊಟೇಲ್‌ಗಳಲ್ಲಿ, ಹೊಟೇಲ್‌ಗಳಲ್ಲಿ ರೆಸ್ಟೋರೆಂಟ್‌ಗಳಲ್ಲಿ ಮದ್ಯದಂಗಡಿಗಳಲ್ಲಿ ಮದ್ಯ ಮಾರಾಟ ಸೇವೆ ಮಾಡುವುದನ್ನು ಮದ್ಯ ಸಾಗಾಟ ಹಾಗೂ ಸರಬರಾಜು ಮಾಡುವುದನ್ನು ಏ.29 ರಂದು ಸಂಪೂರ್ಣವಾಗಿ ನಿಷೇಧಿಸಿ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.