ಮೇಲುಸ್ತುವಾರಿ ಸಮಿತಿಗೆ ಶಿಫಾರಸು
ರಸಗೊಬ್ಬರ ಮತ್ತು ಬಿತ್ತನೆ ಬೀಜ ಮಾರಾಟದ ಮೇಲೆ ನಿಗಾ ವಹಿಸಲು ತಹಸೀಲ್ದಾರ್, ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ, ಸಹಾಯಕ ಕೃಷಿ ನಿರ್ದೇಶಕರು ಮತ್ತು ಸರ್ಕಲ್ ಇನ್ಸ್ಪೆಕ್ಟರ್ ಅವರನ್ನೊಳಗೊಂಡ ತಾಲೂಕು ಮಟ್ಟದ ಸಮಿತಿ ರಚಿಸುವಂತೆ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ಶಿಫಾರಸು ಮಾಡಿದ್ದಾರೆ.
ಈ ಸಮಿತಿ ರಸಗೊಬ್ಬರ ಬಿತ್ತನೆ ಬೀಜದ ಸರಬರಾಜು, ಮಾರಾಟದ ಮೇಲುಸ್ತುವಾರಿ, ಹೆಚ್ಚಿನ ಬೆಲೆ ಪಡೆಯದಂತೆ ನಿಗಾ ಹಾಗೂ ಅಕ್ರಮ ದಾಸ್ತಾನು ತಡೆಯಲು ಕ್ರಮ ವಹಿಸುವುದರ ಜೊತೆಗೆ ಕಾನೂನು ಸುವ್ಯವಸ್ಥೆಗೆ ಸಹಕರಿಸಲಿದೆ ಎಂದರು.