ಹಲವು ಕ್ರಮಗಳ ಬಗ್ಗೆ ಚರ್ಚೆ
ರಸಗೊಬ್ಬರದ ಮುಖ ಬೆಲೆಯಲ್ಲಿ ನಿಯಂತ್ರಣ, ಕೂಲಿ ಕಾರ್ಮಿಕರ ಸಮಸ್ಯೆಗಳು-ಹುಕ್ ಬಳಸುವುದು, ದಿನಗೂಲಿ ದರ, ತಾಲೂಕಿಗೆ ಅಗತ್ಯಾನುಸಾರ ರಸಗೊಬ್ಬರ ಪೂರೈಕೆ, ಸಗಟು ರಸಗೊಬ್ಬರ ಮಾರಾಟಗಾರರಿಂದ ಚಿಲ್ಲರೆ ರಸಗೊಬ್ಬರ ಮಾರಾಟಗಾರರಿಗೆ ಪೂರೈಸುವ ರಸಗೊಬ್ಬರದ ಉಸ್ತುವಾರಿ, ನಿಗದಿತ ರಸಗೊಬ್ಬರ ಉತ್ಪನ್ನಗಳ ಅಗತ್ಯತೆ,
(ಉದಾಹರಣೆಗೆ- ಆರ್ಸಿ ಎಫ್-15,15,15, ಫ್ಯಾಕ್ಟ್-20-20,
ಎಂಸಿಎಫ್ ಮಂಗಳ, ಯೂರಿಯಾ, ಡಿಎಪಿ ಇತ್ಯಾದಿ), ರಾಜ್ಯ ಉಗ್ರಾಣ ನಿಗಮದಲ್ಲಿ ರಸಗೊಬ್ಬರ ದಾಸ್ತಾನು ಸಮಸ್ಯೆಗಳು ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು. 2014ನೇ ಮುಂಗಾರು ಹಂಗಾಮಿನಲ್ಲಿ ಏಪ್ರಿಲ್ನಲ್ಲಿ 10250 ಟನ್, ಮೇ ತಿಂಗಳಲ್ಲಿ 19480 ಟನ್, ಜೂನ್ನಲ್ಲಿ 18350 ಟನ್, ಜುಲೈನಲ್ಲಿ 18060 ಟನ್, ಆಗಸ್ಟ್ನಲ್ಲಿ 20600 ಟನ್, ಸೆಪ್ಟಂಬರ್ನಲ್ಲಿ 15610 ಟನ್ ಸೇರಿದಂತೆ ಒಟ್ಟಾರೆ 102350 ಟನ್ ರಸಗೊಬ್ಬರದ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಅನ್ಬುಕುಮಾರ್ ತಿಳಿಸಿದರು.