ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕಸ ತೆಗೀದಿದ್ರೆ ಬೀಗ ಹಾಕ್ತೀವಿ

Mainashree
Updated On : 29 Apr 2014, 11:44 am

ಕ.ಪ್ರ. ವಾರ್ತೆ ಟಿ ಹಾಸನ ಟಿ ಏ. 29
ನಗರದ ಕಸವನ್ನು ಮೇ. 10ರೊಳಗೆ ಬೇರೆಡೆಗೆ ವಿಲೇವಾರಿ ಮಾಡದಿದ್ದರೆ  ನಗರಸಭೆ ಕಚೇರಿಗೆ ಬೀಗ ಜಡಿದು ಪಕ್ಷಾತೀತವಾಗಿ ಪ್ರತಿಭಟನೆ ಮಾಡುವುದಾಗಿ ಹಾಸನ ನಗರ ನಾಗರೀಕ ಹಿತಕ್ಷಣಾ ವೇದಿಕೆ ಸಂಚಾಲಕ ಅಗಿಲೆ ಯೋಗೀಶ್ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಸ ವಿಲೇವಾರಿಯ ಬಗ್ಗೆ ನಗರಸಭೆಗೆ ತಿಳಿದಿದ್ದರೂ ಸಹ ಸ್ವಂತ ಇಚ್ಛಾಶಕ್ತಿಯಿಂದ ಸಭೆ ಒಳಗೆ ಕಿತ್ತಾಟ ಮಾಡಿಕೊಂಡು ಕಾಲಹರಣ ಮಾಡುತ್ತಿದ್ದಾರೆ ಎಂದು ದೂರಿದರು.
ನಗರಸಭೆಯಿಂದ ಅಗಿಲೆ ಬೋರೆಯ ಮೇಲೆ 22 ಎಕರೆ ಭೂಮಿಯನ್ನು ಕಸ ವಿಲೇವಾರಿ ಮತ್ತು ಕಸ ವಿಂಗಡಣೆಗೆ ಖರೀದಿಸಲಾಗಿದೆ. ಈ ಸ್ಥಳಕ್ಕೆ ಕಸ ವಿಲೇವಾರಿ ಮಾಡದೇ, ಲಕ್ಷಾಂತರ ರು. ಖರ್ಚು ಮಾಡಿ ವ್ಯರ್ಥ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತ್ಯಾಜ್ಯ ವಿಲೇವಾರಿ ಸ್ಥಳಾಂತರಿಸಿ: ಜಿಲ್ಲಾ ಬಂದೀಖಾನೆ ಹಿಂಭಾಗ ನಗರದ ತ್ಯಾಜ್ಯ ಸುರಿಯುತ್ತಿರುವುದರಿಂದ ಶ್ರೀನಗರ ಬಡಾವಣೆಯ ಜನತೆ ವಾಸಿಸಲು ಕಷ್ಟಕರವಾಗಿದೆ. ನಾನಾ ರೋಗಗಳಿಂದ ನರಳುತ್ತಿದ್ದಾರೆ.  ಗೊರೂರು ರಸ್ತೆ ಬಳಿ ಇರುವ ಅಂಗಡಿ ಮಾಲೀಕರು, ವ್ಯಾಪಾರಸ್ತರು ಮತ್ತು ಸುತ್ತಮುತ್ತಲ ಜನತೆ ಓಡಾಡಲು ಆಗದೇ ಕಸದ ಕೆಟ್ಟ ವಾಸನೆಯಿಂದ ಮೂಗು ಮುಚ್ಚಿಕೊಂಡು ಸಂಚರಿಸಬೇಕಾಗಿದೆ ಎಂದು ದೂರಿದರು.
ಬರೀ ಕಿತ್ತಾಟ: ಇಂತಹ ಸಮಸ್ಯೆಯನ್ನು ನಗರಸಭೆ ಸರಿಪಡಿಸದೆ ಸದಸ್ಯರು ಕೇವಲ ಕಿತ್ತಾಟ ನಡೆಸುವ ಮೂಲಕ ಕಾಲ ಕಳೆಯುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಮೇ 10ರೊಳಗೆ ಈ ಸಮಸ್ಯೆಯನ್ನು ಬಗೆ ಹರಿಸದಿದ್ದರೆ ನಾಗರೀಕ ವೇದಿಕೆಯಿಂದ ತೀವ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ನಗರಸಭೆ ಮಾಜಿ ಸದಸ್ಯೆ ಆಶಾ, ಸುರೇಶ್, ಕೃಷ್ಣಮೂರ್ತಿ ಹಾಗೂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement