ಯೋಧನ ಬಿಡುಗಡೆಗೆ ಶ್ರೀರಾಮ ಸೇನೆ ಆಗ್ರಹ
ಸಕಲೇಶಪುರ: ಬಂಧಿಸಲಾಗಿರುವ ಎ.ಎನ್.ಎಫ್ ಯೋಧ ನವೀನ್ ನಾಯ್ಕನನ್ನು ಸರ್ಕಾರ ಬೇಷರತ್ತಾಗಿ ಬಿಡುಗಡೆ ಮಾಡಬೇಕು. ತಪ್ಪಿದಲ್ಲಿ ರಾಜ್ಯ ಸರ್ಕಾರ ಗಂಬೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಶ್ರೀರಾಮ ಸೇನೆಯ ತಾಲೂಕು ಅಧ್ಯಕ್ಷ ಉಮೇಶ್ ಎಚ್ಚರಿಸಿದ್ದಾರೆ. ಆಕಸ್ಮಿಕ ಘಟನೆಗಳಿಗೆ ರಾಜಕೀಯ ಬಣ್ಣ ಬಳಿದು ಎ.ಎನ್.ಎಫ್ ಯೋಧನನ್ನು ಬಂಧಿಸುವ ಮೂಲಕ ಎ.ಎನ್.ಎಫ್ ಯೋಧರ ಹಾಗೂ ಪೊಲೀಸರ ಮನೋಸ್ಥೈರ್ಯ ಕುಗ್ಗಿಸುವ ಕೆಲಸಕ್ಕೆ ಮುಂದಾಗಿರುವ ರಾಜ್ಯ ಸರ್ಕಾರದ ನಡೆ ತೀರ ಖಂಡನಿಯ ಎಂದು ಹೇಳಿದ್ದಾರೆ. ಯೋಧನನ್ನು ಬಿಡುಗಡೆ ಮಾಡಬೇಕು. ತಪ್ಪಿದಲ್ಲಿ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.