ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ರಾಮ್‌ದೇವ್ ಗಡಿಪಾರು ಮಾಡಿ

Mainashree
Updated On : 29 Apr 2014, 11:45 am

ಹಾಸನ:  ದಲಿತರು ಹಾಗೂ ರಾಹುಲ್ ಗಾಂಧಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಬಾಬಾ ರಾಮ್‌ದೇವ್ ಅವರನ್ನು ಗಡಿಪಾರು ಮಾಡಬೇಕೆಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ರಾಜ್ಯ ಸಂಚಾಲಕ ಡಿ.ಸಿ. ಸಣ್ಣಸ್ವಾಮಿ ಆಗ್ರಹಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಹಾಗೂ ಸುಸಂಸ್ಕೃತ ಕುಟುಂಬ ಹಾಗೂ ಇಡೀ ದೇಶ-ವಿದೇಶ ಮೆಚ್ಚುವಂತ ಮಾಜಿ ಪ್ರಧಾನಿ ಪುತ್ರ ರಾಷ್ಟ್ರೀಯ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೊಸ ಆಲೋಚನೆಗಳನ್ನು ಹೊಂದಿದ್ದಾರೆ.
ಸಮಾಜದ ಪರಿವರ್ತನೆ, ಜಾತಿ ನಿರ್ಮೂಲನೆಗಾಗಿ ಶ್ರಮಿಸುತ್ತಿರುವ ಅವರು, ಎಲ್ಲಾ ಸಮುದಾಯದ ವಾಸ್ತವ್ಯ ಅಂಶವನ್ನು ಅರಿಯಲು ದಲಿತ ಭಾಗಗಳಲ್ಲಿ ಪ್ರವಾಸ ಮಾಡುತ್ತಿದ್ದಾರೆ.
ಇಂತಹ ಕಾರ್ಯ ಸಹಿಸಲಾರದೆ ರಾಮ್ ದೇವ್ ಕಪಟವಾಗಿ ಹನಿಮೂನ್ ಮತ್ತು ಪಿಕ್‌ನಿಕ್ ಮಾಡಲಾಗುತ್ತಿದೆ ಎಂದು ಹೇಳಿಕೆ ನೀಡಿರುವುದು ಒಂದು ರೀತಿ ಅವರಿಗೆ ಬುದ್ಧಿ ಭ್ರಮಣೆಯಾಗಿರುವಂತೆ ಕಾಣುತ್ತಿದೆ ಎಂದು ಆರೋಪಿಸಿದರು.
ಒತ್ತಾಯ: ರಾಹುಲ್ ಗಾಂಧಿ ಎಲ್ಲಾ ವರ್ಗದವರನ್ನು ಒಲಿಸಿಕೊಳ್ಳಲು ಮುಂದಾಗಿದ್ದಾರೆಯೇ ಹೊರತು ಕೇವಲ ದಲಿತ ವರ್ಗದವರನ್ನಲ್ಲ ಎಂದ ಸಣ್ಣಸ್ವಾಮಿ, ಒಬ್ಬ ಯೋಗಗುರವಾಗಿ ಕೀಳು ಭಾಷೆ ಬಳಸುತ್ತಿರುವುದು ಸಮಾಜ ತಲೆ ತಗ್ಗಿಸುವಂತ ಕೆಲಸವಾಗಿದೆ.
ರಾಮ್‌ದೇವ್ ಅವರನ್ನು ಶೀಘ್ರವೇ ಪೊಲೀಸರು ಬಂಧಿಸಬೇಕು.
ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement