ಸಂಭ್ರಮದ ನವಿಲೆ ಗ್ರಾಮ ದೇವತೆ ರಥೋತ್ಸವ
ನುಗ್ಗೇಹಳ್ಳಿ (ಚನ್ನರಾಯಪಟ್ಟಣ ತಾ.): ಇಲ್ಲಿಗೆ ಸಮೀಪದ ಇತಿಹಾಸ ಪ್ರಸಿದ್ದ ನವಿಲೆ ಗ್ರಾಮ ದೇವತೆ ಕೆಂಪಮ್ಮ ದೇವರ ಬ್ರಹ್ಮ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸೋಮವಾರ ಸಡಗರ ಸಂಭ್ರಮದಿಂದ ನಡೆಯಿತು.
ನವಿಲೆ ಭಕ್ತೆರಹಳ್ಳಿ ಕಾಮಾನಾಯಕನಹಳ್ಳಿ, ಚವೇನಹಳ್ಳಿ, ಚೋಕೇನಹಳ್ಳಿ, ಆದಿಹಳ್ಳಿ, ನವಿಲೆ ಗೇಟ್, ಹೋಸೂರು, ಚೆಟ್ಟನಹಳ್ಳಿ, ಬೋವಿಕಾಲೋನಿ, ಭೈರಾಪುರ, ರೆಚ್ಚಿಹಳ್ಳಿ, ಚನ್ನೇನಹಳ್ಳಿ, ಅಪ್ಪೇನಹಳ್ಳಿ, ತಿಮ್ಮಲಾಪುರ, ಬೆಲದ್ದರಹಳ್ಳಿ, ಹಾಗೂ 17 ಹಳ್ಳಿ ಗ್ರಾಮಸ್ಥರು ಜಾತ್ರಾಮಹೋತ್ಸವದಲ್ಲಿ ಭಾಗವಹಿಸಿ ಗ್ರಾಮದೇವತೆಗೆ ಪೂಜೆ ಸಲ್ಲಿಸಿದರು. ಧರ್ಮದರ್ಶಿ ನಾಗೇಂದ್ರ, ಪುರೋಹಿತರಾದ ಕೃಷ್ಣಮೂರ್ತಿ, ಅಖಿಲ ಭಾರತ ವೀರಶೈವ ಮಹಾಸಭಾದ ತಾ. ಅಧ್ಯಕ್ಷ ಎನ್. ರಮೇಶ್, ಮಾಜಿ ಗ್ರಾ.ಪಂ ಅಧ್ಯಕ್ಷ ಎನ್.ಕೆ ನಾಗರಾಜು, ನಾಗೇಶ್, ರವೀಶ್, ದಯಾನಂದ, ಗ್ರಾ.ಪಂ ಸದಸ್ಯ ನಾಗೇಶ್, ರೇವಣ್ಣ, ಶಿವಪ್ಪ ಇದ್ದರು.