ಸರ್ವರ್ ಜೊತೆ ಆಕಾಂಕ್ಷೆಯೂ ಹ್ಯಾಂಗ್?
ಆಲೂರು: ತಾಲೂಕಿನಾದ್ಯಂತ ಇಂಟರ್ನೆಟ್ ಸರ್ವರ್ ಕೊಟ್ಟ ಪರಿಣಾಮ ಡಿಇಡಿ ಹಾಗೂ ಬಿಇಡಿ ಕೋರ್ಸ್ ಮುಗಿಸಿ ಶಿಕ್ಷಕರಾಗುವ ಕನಸು ಕಾಣುತ್ತಿರುವ ಭಾವಿ ಶಿಕ್ಷಕರು ಆತಂಕಕ್ಕೆ ಒಳಗಾಗಿದ್ದಾರೆ.
ಏಕೆಂದರೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರ ಹುದ್ದೆಗೆ ಪರೀಕ್ಷೆ ಬರೆವ ಮೊದಲು ಟಿಇಟಿ ಪರೀಕ್ಷೆ ಬರೆದು ಪಾಸಾಗುವುದು ಕಡ್ಡಾಯ.
ಈ ಪರೀಕ್ಷೆಗೆ ಅರ್ಜಿಗಳನ್ನು ಹಾಕಲು ಏ. 19ರಿಂದ ಮೇ 3ರವರೆಗೆ ದಿನಾಂಕ ನಿಗದಿಗೊಳಿಸಲಾಗಿದೆ. ಅಷ್ಟರೊಳಗೆ ಎಲ್ಲರೂ ಅರ್ಜಿಗಳನ್ನು ಸಲ್ಲಿಸಿ, ಅದಾದ ಎರಡು ದಿನಗಳೊಳಗೆ ಶುಲ್ಕ ಪಾವತಿಸಬೇಕು. ಸಾಮಾನ್ಯ ಅಭ್ಯರ್ಥಿಗಳಿಗೆ ರು. 510 ಹಾಗೂ ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ ರು. 250 ಶುಲ್ಕ ನಿಗದಿಪಡಿಸಲಾಗಿದ್ದು, ಡಿಡಿ ಮುಖಾಂತರ ಇದನ್ನು ಪಾವತಿಸಬೇಕು.
ಆದರೆ, ಕಳೆದೆರಡು ಮೂರು ದಿನಗಳಿಂದಲೂ ತಾಲೂಕು ಕೇಂದ್ರಗಳಲ್ಲಿ ಸರ್ವರ್ ಕೈ ಕೊಟ್ಟಿರುವುದರಿಂದಾಗಿ ಆತಂಕಕ್ಕೆ ಒಳಗಾಗಿರುವ ಅರ್ಜಿದಾರರು ಜಿಲ್ಲಾ ಕೇಂದ್ರದಲ್ಲಿ ಇರುವ ಇಂಟರ್ನೆಟ್ ಪಾರ್ಲರ್ಗಳಿಗೆ ಮುಗಿಬಿದ್ದಿದ್ದು, ಇಲ್ಲೂ ಅದೇ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಬಾರಿ ಪರೀಕ್ಷೆ ಬರೆಯುವುದರಿಂದ ವಂಚಿತರಾದರೆ ಮತ್ತೊಮ್ಮೆ ಶಿಕ್ಷಕರ ಹುದ್ದೆಗೆ ಸರ್ಕಾರ ಕರೆ ನೀಡುವವವರೆಗೂ ಕಾಯುವ ಪರಿಸ್ಥಿತಿ ಬಂದೊದಗಿಲೆದ.
ಸರ್ಕಾರ 5 ವರ್ಷಕ್ಕೊಮ್ಮೆ ಅಥವಾ 10 ವರ್ಷಕ್ಕೊಮ್ಮೆ ಶಿಕ್ಷಕರ ನೇಮಕಾತಿ ಮಾಡುತ್ತಿದ್ದು, ಈಗ ಅರ್ಜಿ ಸಲ್ಲಿಸಲು ಮುಂದಾಗಿರುವವರಲ್ಲೇ ಹಲವಾರು ಮಂದಿಗೆ ಈಗಾಗಲೇ ಸಾಕಷ್ಟು ವಯಸ್ಸಾಗಿದೆ. ಅರ್ಹತೆ ಇದ್ದು ಕೇವಲ ತಾಂತ್ರಿಕ ತೊಂಮದರೆಯಿಂದ ಶಿಕ್ಷಕರ ಅರ್ಹತಾ ಪರೀಕ್ಷೆ (ಖಊಿಖಿ) ಬರೆಯುವುದರಿಂದ ವಂಚಿತರಾದರೆ ಇಂತಹ ಸಾವಿರಾರು ಅಭ್ಯರ್ಥಿಗಳ ಶಾಪಕ್ಕೆ ಸರ್ಕಾರ ಗುರಿಯಾಗಬೇಕಾಗುತ್ತದೆ.
ಆದ್ದರಿಂದ ಇಂತಹ ಸಂದರ್ಭದಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿ ಸರ್ಕಾರ ಶೀಘ್ರ ಸಮಸ್ಯೆಯನ್ನು ಬಗೆಹರಿಸುವುದರ ಜತೆಗೆ ಅರ್ಜಿ ಸಲ್ಲಿಸಲು ನಿಗದಿಗೊಳಿಸಿರುವ ದಿನಾಂಕವನ್ನು ಇನ್ನಷ್ಟು ದಿನ ಮುಂದೂಡಬೇಕಿದೆ.