ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಈ ಬಾರಿ ದೊಡ್ಡವರನ್ನೇ ನಡುಗಿಸಿದ್ದೇವೆ: ಮಂಜು

Mainashree
Updated On : 1 May 2014, 12:35 pm

ಅರಕಲಗೂಡು: ಕಾರ್ಯಕರ್ತರ ಶ್ರಮ ನನ್ನ ಶ್ರಮಕ್ಕಿಂತಲೂ ಅಧಿಕ ಮತ್ತು ಬೆಲೆಕಟ್ಟಲಾಗದ್ದು. ದೇವೇಗೌಡರ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂಬ ಆಶಯ ನನ್ನದಾಗಿತ್ತು. ಅಂತಹ ಅವಕಾಶ ದೊರಕಿದ್ದಕ್ಕೆ ಹೆಮ್ಮೆ ಇದೆ  ಎಂದು ಹಾಸನ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ಎ.ಮಂಜು ಅಭಿಪ್ರಾಯಪಟ್ಟರು.
ಅರಕಲಗೂಡಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಏರ್ಪಡಿಸಿದ್ದ ಕೃತಜ್ಞತಾ ಸಭೆಯಲ್ಲಿ ಹೇಳುವ ಮಾತನಾಡಿದ ಅವರು,  ಚುನಾವಣೆಯಲ್ಲಿ ತಮ್ಮ ಪರ ಉತ್ತಮ ವಾತಾವರಣ ಇದೆ. ಗೆದ್ದರೂ-ಸೋತರೂ ನಾನು ನಿಮ್ಮವನೇ ಎಂದರು. ಜಿಲ್ಲೆಯಲ್ಲಿ ಗೌಡರ ಕುಟುಂಬದವರೂ ಮತ ಕೇಳುವ ಪರಿಸ್ಥಿತಿ ಎದುರಾದುದು ಇದೇ ಮೊದಲು. ಈ ಬಾರಿ ಗೌಡರು ತಮ್ಮ ಸ್ವಂತ ಜೇಬಿನಿಂದ ಹಣ ಹಾಕಿ ರಾಜಕೀಯ ಮಾಡಿದ್ದಾರೆ. ಜಿಲ್ಲೆಯಲ್ಲಿ ಇದೇ ಮೊದಲು ಇಂತಹ ಚುನಾವಣೆ ಎದುರಿಸಿದ್ದಾರೆ ಎಲ್ಲ ಕಾಂಗ್ರೆಸ್ ಮುಖಂಡರೂ ಒಗ್ಗಟ್ಟಿನಿಂದ ಚುನಾವಣೆ ಎದುರಿಸಿದ್ದೇವೆ ಇದು ಪಕ್ಷದ ಸಂಘಟನೆಗೆ ಪೂರಕವಾಗಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು.
ಮಾಟ- ಮಂತ್ರ ತಾಗಲ್ಲ: ದೇವೇಗೌಡರು ಚುನಾವಣೆ ವೇಳೆ ಮಾಟ ಮಂತ್ರ ಮಾಡಿಸುತ್ತಾರೆ ಎಂಬ ಬಗೆಗೆ ಹಲವರು ನನ್ನೊಂದಿಗೆ ಹೇಳಿದರು. ಆದರೆ ಈ ಬಾರಿ ಅಂತಹ ಯಾವ ಮಾಟ-ಮಂತ್ರಗಳೂ ನಮಗೇನೂ ಮಾಡಲ್ಲ ಎಂಬುದು ಸಾಬೀತಾಗಿದೆ ಎಂದರು.
ನೇರ ಗಮನಕ್ಕೆ ತನ್ನಿ: ಕ್ಷೇತ್ರದಲ್ಲಿ ಯಾವುದೇ ಅಧಿಕಾರಿ ಸರಿಯಾಗಿ ಕೆಲಸ ಮಾಡದಿದ್ದರೆ ನೇರ ನನ್ನ ಗಮನಕ್ಕೆ ತನ್ನಿ ಎಂದ ಅವರು ಕೊಟ್ಟ ಅರ್ಜಿಗೆ ತಪ್ಪದೇ ಹಿಂಬರಹ ಪಡೆಯಿರಿ ಎಂದರು. ಚುನಾವಣೆಯಲ್ಲಿ ತಮ್ಮ ಪರ ಉತ್ತಮ ವಾತಾವರಣ ಇದೆ. ಗೆದ್ದರೂ-ಸೋತರೂ ನಾನು ನಿಮ್ಮವನೇ ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೈರೇಗೌಡ, ಎಚ್.ಮಾದೇಶ್, ಯುವ ಕಾಂಗ್ರೆಸ್ ಕಾರ್ಯದರ್ಶಿ ಪ್ರಸನ್ನ ಕುಮಾರ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ  ಮಂಥರ್‌ಗೌಡ, ಮಾಜಿ ಶಾಸಕ ವಿಶ್ವನಾಥ್, ಪಕ್ಷದ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಚಂದ್ರಕಲಾ, ಪೀರ್‌ಸಾಬ್, ಪಪಂ ಸದಸ್ಯ ನಿರಂಜನ, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಬಾಣದಹಳ್ಳಿ ಗಣೇಶ್, ಮುತ್ತಿಗೆ ರಮೇಶ್, ಎ.ಸಿ.ಮಧು, ರಘು ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement