ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಏಕತೆಗೆ ಮನಸ್ಸು ಮಾಡಬೇಕು

Mainashree
Updated On : 1 May 2014, 12:04 pm

ಕ.ಪ್ರ.ವಾರ್ತೆ  ಹಾಸನ  ಏ.30
ದೇಶದ ಐಕ್ಯತೆಗಾಗಿ ಯುವಕರು ಮನಸ್ಸು ಮಾಡುವುದು ಅತ್ಯವಶ್ಯಕ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತ್ಯಾಮಗೊಂಡ್ಲು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಶ್ಯಾಮಸುಂದರ ಎಸ್. ಕೋಚಿ ತಿಳಿಸಿದರು.
ನಗರದ ಸರ್ಕಾರಿ ಕಲಾ ಕಾಲೇಜಿನ ಸಾಂಸ್ಕತಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವನದ ಅತ್ಯ ಮೂಲ್ಯ ಅನುಭವಗಳನ್ನು ಪ್ರತಿ ವಿದ್ಯಾರ್ಥಿಯು ದೇಶೋನ್ನತಿಗಾಗಿ ಮೀಸಲಾಗಿಡಬೇಕು. ಭಾರತದ ಸಾಧನೆಯ ನೆಲೆಗಟ್ಟು ಗುರು ಶಿಷ್ಯ ಸಂಬಂಧದಿಂದ ಕೂಡಿರುವಂತದ್ದು ಎಂದು ಹೇಳಿದರು. ಕಾಲೇಜು ಶಿಕ್ಷಣ ಇಲಾಖೆಯ ಹೆಚ್ಚುವರಿ ನಿರ್ದೇಶಕ ವಿದ್ವಾನ್ ಪ್ರೊ. ಟಿ.ಎನ್. ಪ್ರಭಾಕರ್ ಮಾತನಾಡಿ, ವಿದ್ಯಾರ್ಥಿಗಳು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಂಪೂರ್ಣವಾಗಿ ತೊಡಗಿಕೊಂಡಾಗ ಮಾತ್ರ ಪರಿ ಪೂರ್ಣ ಬೌದ್ಧಿಕವಾಗಿ ಪ್ರಗತಿ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ವರ್ಷದ ವ್ಯಕ್ತಿಯಾಗಿ ಪುರಸ್ಕತರಾದ ರಾಮಕೃಷ್ಣ ನರ್ಸಿಂಗ್ ಹೋಂನ ಖ್ಯಾತ ವ್ಯೆದ್ಯ ಡಾ. ಗುರುರಾಜ್ ಹೆಬ್ಬಾರ್ ಮತ್ತು ಸುವರ್ಣ ಮಹಿಳಾ ಸಾಧಕಿ ಪುರಸ್ಕಾರಕ್ಕೆ ಪಾತ್ರರಾದ ಶಂಷಾದ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ  ಡಾ. ಐ.ಎಂ. ಮೋಹನ್ ಮಾತನಾಡಿ, ಕಾಲೇಜು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕಾಗಿ ಪೂರಕ ವಾತಾವರಣ ವನ್ನು ಸೃಷ್ಟಿಸಿ ಅವರಲ್ಲಿ ಕಲಿಕೆಯ ಜೊತೆಯಲ್ಲಿ ವೈಚಾರಿಕ ಆಸಕ್ತಿ ಬೆಳೆಸುವಂತಹ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ ಎಂದರು. ವಿವಿಧ ವಿಭಾಗ ಘಟಕಗಳ ವರದಿಗಳನ್ನು ವಾಚಿಸಲಾಯಿತು.
ಸಾಂಸ್ಕತಿಕ ವೇದಿಕೆಯ ಸಂಚಾಲಕ ಪ್ರೊ.ಡಿ.ಬಿ. ಚನ್ನಬಸಪ್ಪ ಸ್ವಾಗತಿಸಿದರು. ಪ್ರೊ.ಎಸ್. ಸೀಮಾ ವಂದಿಸಿದರು. ಪ್ರೊ.ಟಿ.ಪಿ. ಪುಟ್ಟರಾಜು ಕಾರ್ಯಕ್ರಮ ನಿರೂಪಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement