ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ: ಡಾ. ಸಾವಿತ್ರಿ
ಹಾಸನ: ಹೆಣ್ಣುಮಕ್ಕಳಲ್ಲಿ ಹದಿ ಹರೆಯದಲ್ಲಿ ಮಾನಸಿಕ, ದೈಹಿಕವಾಗಿ ಸಾಕಷ್ಟು ಬದಲಾವಣೆಳಾಗುವುದು ಸಹಜ. ಎಲ್ಲರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದರೊಂದಿಗೆ ಶಿಕ್ಷಣ ದಲ್ಲಿ ಉತ್ತಮ ಸಾಧನೆ ಮಾಡಿ, ಜೀವನದಲ್ಲಿ ಯಶಸ್ಸಿನ ಗುರಿ ಮುಟ್ಟಬೇಕೆಂದು ಡಾ. ಸಾವಿತ್ರಿ ಹೇಳಿದರು. ಬುಧವಾರ ನಗರದ ಅನನ್ಯ ಟ್ರಸ್ಟ್ ವತಿಯಿಂದ ಎಂ. ಕೃಷ್ಣ ಅಂಧಮಕ್ಕಳ ಶಾಲೆಯಲ್ಲಿ ಏರ್ಪಡಿಸಿದ್ದ ಲೈಂಗಿಕ ದೌರ್ಜನ್ಯ ಕುರಿತ ಕಾರ್ಯಕ್ರಮ ಉದ್ಘಾಟಿಸಿ, ಅಂಧಮಕ್ಕಳಿಗೆ ವಿಶೇವಾಗಿ ವ್ಯಕ್ತಿಗಳನ್ನು ಮುಟ್ಟಿದ ತಕ್ಷಣ ಗುರುತಿಸುವ ಜ್ಞಾನವಿರುತ್ತದೆ. ಹಾಗಾಗಿ ಅಪರಿಚಿತರಿಂದ ದೂರವಿರಬೇಕೆಂದು ಸಲಹೆ ನೀಡಿದರು. ವಕೀಲೆ ಬಿಂದುಶ್ರೀ, ವಿಕಲ ಚೇತನರಿಗಾಗಿ ಇರುವ ಕಾನೂನು ಬಗ್ಗೆ ವಿವರಿಸಿ, 18 ವರ್ಷಕ್ಕಿಂತ ಮುಂಚೆ ಮದುವೆಯಾಗುವುದನ್ನು ನಿರಾಕರಿಸಬೇಕು. ವಿಕಲಚೇತನರು ದೌರ್ಜನ್ಯಕ್ಕೊಳಗಾದಾಗ ಇರುವ ಕಾನೂನು ಸೌಲಭ್ಯವನ್ನು ಬಳಸಿಕೊಳ್ಳ ಬೇಕೆಂದು ತಿಳಿಸಿದರು.
ಶಾಲಾ ಮಕ್ಕಳಿಗೆ ವೇಷಭೂಷಣ ಸ್ಪರ್ಧೆ
ಹಾಸನ: ನಗರದ ಹೇಮಾವತಿ ಮಹಿಳಾ ಸಂಘದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆ. 9 ರಂದು ಮಧ್ಯಾಹ್ನ 2 ಗಂಟೆಗೆ ಶ್ರೀ ರಾಮಕೃಷ್ಣ ವಿದ್ಯಾಲಯದಲ್ಲಿ ಒಂದರಿಂದ ನಾಲ್ಕನೇ ತರಗತಿ ಮಕ್ಕಳಿಗೆ ಸ್ವಾತಂತ್ರ್ಯ ಹೋರಾಟಗಾರರ ವೇಷ ಭೂಷಣ ಸ್ಪರ್ಧೆ, 5ರಿಂದ 7ನೇ ತರಗತಿ ಮಕ್ಕಳಿಗೆ ರಸ ಪ್ರಶ್ನೆ ಸ್ಪರ್ಧೆ ಹಾಗೂ 8 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ದೇಶಭಕ್ತಿಗೀತೆ ಸ್ಪರ್ಧೆ ಏರ್ಪಡಿಸಲಾಗಿದೆ. ಪ್ರತಿ ಶಾಲೆಯಿಂದ ಸ್ಪರ್ಧೆಗೆ 5 ಮಕ್ಕಳಿಗೆ ಮಾತ್ರ ಅವಕಾಶವಿದ್ದು, ಹೆಚ್ಚಿನ ಮಾಹಿತಿಗೆ ಮೊ.7795952182 ಸಂಪರ್ಕಿಸಲು ಸಂಘದ ಅಧ್ಯಕ್ಷೆ ಪದ್ಮಶರ್ಮ ತಿಳಿಸಿದ್ದಾರೆ.
ಕಾನೂನು ಅರಿವು
ಹಾಸನ: ತಾಲೂಕಿನ ಶಾಂತಿಗ್ರಾಮದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಾನೂನು ಅರಿವು-ನೆರವು ಕಾರ್ಯಕ್ರಮ ಏರ್ಪಡಿಸಲಾಗಿತ್ತು. ನ್ಯಾಯಾಧೀಶ ಕೆ.ಎಸ್. ವಿಜಯ್ ಕಾರ್ಯಕ್ರಮ ಉದ್ಘಾಟಿಸಿ ಜನನ ಪೂರ್ವಲಿಂಗ ಪತ್ತೆ ನಿಷೇಧ ಕಾಯ್ದೆಯ ಬಗ್ಗೆ ಉಪನ್ಯಾಸ ನೀಡಿದರು. ಹಿರಿಯ ವಕೀಲ ಮಳಲಿ ಜಯರಾಂ ಅವರು ಉಚಿತ ಕಾನೂನು ಸಲಹೆಗಳ ಬಗ್ಗೆ ಮಾಹಿತಿ ನೀಡಿದರು. ಪಂಚಾಯತ್‌ರಾಜ್ ಕಾಯ್ದೆಯಲ್ಲಿ ಗ್ರಾಮಸ್ಥರ ಪಾತ್ರ ವಿಷಯ ಕುರಿತು ಎಂ.ಆರ್.ಯೋಗೇಶ್ ಮಾತನಾಡಿದರು. ಅತಿಥಿಗಳಾಗಿ ಡಾ.ಕೃಪಾ ಆಚಾರ್ಯ, ಪಿಡಿಓ ರಂಗನಾಥ ಹಾಗೂ ಗ್ರಾಮಪಂಚಾಯಿತಿ ಅಧ್ಯಕ್ಷ ಶಾಮಣ್ಣ ಉಪಸ್ಥಿತರಿದ್ದರು. ವಕೀಲ ಲಿಂಗರಾಜು ಸ್ವಾಗತಿಸಿದರು. ಸುದೀಪ್ ಕುಮಾರ್ ವಂದಿಸಿದರು.
ಪರೀಕ್ಷೆಗೆ ತರಬೇತಿ
ಹಾಸನ: ನಗರದ ಕೃಷಿಕ್ ಸರ್ವೋದಯ ಫೌಂಡೇಷನ್‌ನಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪರಿಣಿತ ತಜ್ಞರಿಂದ ಫಲಿತಾಂಶ ಪೂರಕ ತರಬೇತಿಯನ್ನು ಆಯೋಜಿಸ ಲಾಗುತ್ತಿದೆ. ಜಿಲ್ಲೆಯ ಉದ್ಯೋಗಾರ್ಥಿಗಳು, ಯಾವ ಯಾವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅರ್ಜಿ ಕರೆದಿದ್ದಾರೆ. ಅರ್ಜಿ ಸಲ್ಲಿಸುವುದು ಹೇಗೆ, ಸಿದ್ಧತೆ ಹೇಗೆ ಇತ್ಯಾದಿ ಮಾಹಿತಿಗಾಗಿ ಕೃಷಿಕ್ ಸರ್ವೋದಯ
ಫೌಂಡೇಷನ್ ಖುದ್ದಾಗಿ ಅಥವಾ ಮೊ. 9845493336 ರ ಮೂಲಕ ಸಂಪರ್ಕಿಸಬಹುದು. ಎಂದು ಸಂಸ್ಥೆಯ ಕಾರ್ಯದರ್ಶಿ ಹೆಚ್.ಪಿ. ಮೋಹನ್ ತಿಳಿಸಿದ್ದಾರೆ.
ಡಾಟಾ ಎಂಟ್ರಿ ಆಪರೇಟರ್ಸ್: ಕೇಂದ್ರ ಸರ್ಕಾರದ ಎಲ್ಲಾ ಕಚೇರಿಗಳಲ್ಲಿ ಲಭ್ಯವಾಗುವ ಡಾಟಾ ಎಂಟ್ರಿ ಆಪರೇಟರ್ಸ್ ಹಾಗೂ ಲೋಯರ್ ಡಿವಿಷನ್ ಕ್ಲರ್ಕ್ ಹುದ್ದೆಗಳ ಭರ್ತಿಗೆ ಸ್ಟಾಫ್ ಸೆಲೆಕ್ಷನ್ ಕಮಿಷನ್ 2014ರ ಅಕ್ಟೋಬರ್ 2ಅಥವಾ ಅಕ್ಟೋಬರ್ 9 ರಂದು ದೇಶದೆಲ್ಲಡೆ ಕಂಬೈಂಡ್ ಹೈಯರ್
ಸೆಕೆಂಡರಿ ಲೆವೆಲ್ ಪರೀಕ್ಷೆ ನಡೆಸಲಿದೆ. ಹೆಚ್ಚಿನ ಮಾಹಿತಿಗಾಗಿ ಮೊ.9845493336 ಸಂಪರ್ಕಿಸಬಹುದು.