ತಡೆಗೋಡೆ ಕಳಪೆ ಕಾಮಗಾರಿ: ಕಾನೂನು ಕ್ರಮಕ್ಕೆ ಆಗ್ರಹ
ಸಕಲೇಶಪುರ: ತಡೆಗೋಡೆ ನಿರ್ಮಾಣದಲ್ಲಿ ಕಳಪೆ ಕಾಮಗಾರಿ ನಡೆಸಿರುವ ಗುತ್ತಿಗೆದಾರರು ಹಾಗೂ ಇದಕ್ಕೆ ಸಹಕರಿಸಿದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳ ಬೇಕು ಹಾಗೂ ಇಲ್ಲಿನ ನಿವಾಸಿಗಳಿಗೆ ಬದಲಿ ಮನೆ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿ ಕುಶಾಲನಗರ ಬಡಾವಣೆಯ ನಾಗರಿಕರು ಪುರಸಭೆ ಮುಂಭಾಗ ಪ್ರತಿಭಟನೆ ನಡೆಸಿದರು.
ಎತ್ತರದ ಪ್ರದೇಶದಲ್ಲಿರುವ ಕುಶಾಲನಗರ ಬಡಾವಣೆಯ ವಿವಿಧ ರಸ್ತೆಗಳಲ್ಲಿ ಸುಮಾರು ಒಂದು ಕಿ.ಮಿ ವ್ಯಾಪ್ತಿಯ ತಡೆಗೋಡೆ ಕಾಮಗಾರಿಯನ್ನು ಕಳೆದ 5 ವರ್ಷಗಳಿಂದ ಪುರಸಭೆಯ ವಿವಿಧ ಅನುಧಾನದಲ್ಲಿ ಮಾಡಲಾಗಿದೆ. ಆದರೆ ಈ ಎಲ್ಲಾ ತಡೆಗೋಡೆಗಳು ಅವೈಜ್ಞಾನಿಕವಾಗಿರುವ ಕಾರಣ ಪ್ರತಿವರ್ಷದ ಮಳೆಗಾಲದಲ್ಲಿ ಕುಸಿದು ಮನೆಗಳ ಮೇಲೆ ಬೀಳುತ್ತಿರುವುದರಿಂದ ಮಳೆಗಾಲ ಆರಂಭವಾದರೆ ಇಲ್ಲಿನ ಜನರು ನಿರ್ಬಯವಾಗಿ ಮನೆಯಲ್ಲಿ ವಾಸಿಸಲು ಸಾದ್ಯವಿಲ್ಲದಂತಾಗಿದೆ.
ಶಿಸ್ತುಕ್ರಮಕ್ಕೆ ಆಗ್ರಹ: ಆದ್ದರಿಂದ ಈ ಕಳಪೆ ಕಾಮಗಾರಿ ನಡೆಸಿರುವ ಗುತ್ತಿಗೆದಾರರು ಹಾಗೂ ಇದಕ್ಕೆ ಸಹಕರಿಸಿದ ಅಭಿಯಂತರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳ ಬೇಕು ಎಂದು ಆಗ್ರಹಿಸಿದ ಪ್ರತಿಭಟನಕಾರರು ಸ್ಥಳಕ್ಕೆ ಉಪವಿಭಾಗಧಿಕಾರಿಗಳು ಆಗಮಿಸ ಬೇಕು ಎಂದು ಪಟ್ಟು ಹಿಡಿದರು. ನಂತರ ಸ್ಥಳಕ್ಕಾಮಿಸಿದ ಉಪವಿಭಾಗಾಧಿಕಾರಿ ಮಧುಕೇಶ್ವರ ಮನವಿ ಸ್ವೀಕರಿಸಿ ಮಾತನಾಡಿ, ತಡೆಗೋಡೆ ಬಗ್ಗೆ ತಜ್ಞರ ವರದಿ ಆಧರಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಬಡಾವಣೆಯ ಮೆಹಭೂಬ್, ಜಾಕೀರ್,ಇಫಾನ್, ಜುಬೇರ್ ಇತರರು ಇದ್ದರು.