ದಾಸರ ಸಂದೇಶಗಳನ್ನು ಜನತೆಗೆ ತಲುಪಿಸಿ: ಪ್ರಾಂಶುಪಾಲ ಶಿವಕುಮಾರ್ ಮನವಿ
ಬೇಲೂರು: ಸಮಾಜದಲ್ಲಿ ಅಂಕು ಡೊಂಕಿನ ಬಗ್ಗೆ ಸಂದೇಶ ನೀಡುವಂಥ ಸಮಾಜ ಸುಧಾರಕರ ಸಂದೇಶಗಳು ಇಂದಿನ ಜನತೆಗೆ ತಲುಪುವಲ್ಲಿ ವಿಫಲವಾಗಿದ್ದೇವೆ ಎಂದು ವಿವೇಕಾನಂದ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಶಿವಕುಮಾರ್ ವಿಷಾದಿಸಿದರು. ಪಟ್ಟಣದ ಪುಟ್ಟಮ್ಮ ಚನ್ನಕೇಶವೇಗೌಡ ಕಲ್ಯಾಣ ಮಂಟಪದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ವಿವೇಕಾನಂದ ಪದವಿ ಪೂರ್ವ ಕಾಲೇಜು ಮತ್ತು ರಾಷ್ಟ್ರೀಯ ಸಂತ ಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ಏರ್ಪಡಿಸಿದ್ದ ಮುತ್ತು ಬಂದಿದೆ ಕೇರಿಗೆ ಎಂಬ ಕಾರ್ಯಕ್ರಮ ಉದ್ಘಾಟಿಸಿ, ಕನಕದಾಸರು ಒಬ್ಬ ಮಹಾನ್ ಕವಿಯಾಗಿ ಕ್ರಾಂತಿಕಾರಿ ವಿಚಾರಧಾರೆಯನ್ನು ಸಮಾಜಕ್ಕೆ ಬೋಧಿಸಿದ್ದಾರೆ ಎಂದರು.
ಕಂದಾಚಾರ ಪಾಲನೆ: ರಾಷ್ಟ್ರೀಯ ಕನಕದಾಸ ಅಧ್ಯಯನ ಕೇಂದ್ರದ ಸಮನ್ವಯಾಧಿಕಾರಿ ಕಾ.ತ.ಚಿಕ್ಕಣ್ಣ ಮಾತನಾಡಿ, 16ನೇ ಶತಮಾನದಲ್ಲಿ ಕನಕದಾಸರು ಮೂಲಕ ಸಮಾಜ ಸುಧಾರ ಣೆಗೆ ಶ್ರಮಿಸಿದರು, ಆದರೆ 21ನೇ ಶತಮಾನ ದಲ್ಲಿರುವ ನಾವು ಇನ್ನೂ ಕೆಟ್ಟ ಸಂಪ್ರದಾಯ ಕಂದಾಚಾರಗಳಲ್ಲಿ ಮುಳುಗುತ್ತಿರುವುದು ವಿಷಾದನೀಯ ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಆನಂದ್ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಅಂಕಗಳಿಗೆ ಮಾತ್ರ ಓದುವು ದನ್ನು ಬಿಟ್ಟು ಆನೇಕ ಮಹನಿಯರ ಆದರ್ಶ ವ್ಯಕ್ತಿತ್ವಗಳ ಸಾಹಿತ್ಯವನ್ನು ಓದುವ ಮೂಲಕ ಅವರ ತತ್ವ ಸಿದ್ಧಾಂತಗಳನ್ನು ತಿಳಿದುಕೊಂಡು ಸಮಾಜಕ್ಕೆ ಉತ್ತಮ ಮಾರ್ಗದರ್ಶಕ ರಾಗಬೇಕು ಎಂದು ಹೇಳಿದರು. ಜಿಲ್ಲಾ ಪಂಚಾಯ್ತಿ ಸದಸ್ಯೆ ಹೇಮಾವತಿ ಮಂಜುನಾಥ್ ಮಾತನಾಡಿದರು