ನಾಲೆ ನೀರು ರಸ್ತೆಗೆ: ತುರ್ತು ಕ್ರಮಕ್ಕೆ ಆಗ್ರಹ
ರಾಮನಾಥಪುರ: ಅರಕಲಗೂಡು ತಾಲೂಕಿನ ಬೆಟ್ಟಸೋಗೆ ಗ್ರಾಮದಲ್ಲಿ ಹಾದು ಹೋಗಿ ರುವ ಹಾರಂಗಿ ಸೀಳು ನಾಲೆಯ ನೀರು ರಸ್ತೆ ಮೇಲೆ ನುಗ್ಗುತ್ತಿದೆ. ಈ ಸೀಳು ನಾಲೆ ನಿರ್ವಹಣೆ ಇಲ್ಲದೇ ಹಾಳಾದ ಪರಿಣಾಮ ಈಗ ಹಾರಂಗಿ ಎಡದಂಡೆ ನಾಲೆಗೆ ಬಿಡುಗಡೆ ಮಾಡಿದ ನೀರು ನೇರವಾಗಿ ರಸ್ತೆ ಮೇಲೆಯೇ ಹರಿಯುತ್ತಿದೆ. ಕಳೆದ ಎರಡು ದಿನಗಳಿಂದ ಓಂದೇ ಸಮನೆ ಹರಿಯುತ್ತಿರುವ ಸೀಳು ನಾಲೆ ನೀರು ಕೆಲವು ವಾಸದ ಮನೆಗಳ ಮುಂದೆ ನುಗ್ಗುತ್ತಿದ್ದು ಕೆಳ ಭಾಗದ ಮನೆಯ ಗೋಡೆಗಳು ಶಿಥಿಲಾವಸ್ಥೆಗೆ ತಲುಪಿವೆ. ಎರಡು ವರ್ಷಗಳ ಹಿಂದೆ
ನಾಲೆ ದುರಸ್ತಿ ಮಾಡಿಸುವ ನೆಪದಲ್ಲಿ ಅರೆಬರೆಯಾಗಿ ಕೆಲಸ ನಿರ್ವಹಿಸದ ಪರಿಣಾಮ ಈಗ ನೀರು ಮುಂದೆ ಹರಿಯದೇ ರಸ್ತೆ ಪಾಲಾಗುತ್ತಿದೆ. ಮನೆಯಿಂದ ಹೊರ ಬರಲು ನಿವಾಸಿಗಳು ಕಿರಿಕಿರಿಯಾಗಿದೆ. ರಸ್ತೆ ದುರಸ್ತಿ ಪಡಿಸುವಂತೆ ಜನಪ್ರತಿನಿಧಿಗಳ
ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆ ಪರಿಸಲು ಗ್ರಾಮಸ್ಥರು ಒತ್ತಾಯಿಸಿದ್ದಾರೆ.