ಹಸಿರಲೆ ಗೊಬ್ಬರದ ಮಾಹಿತಿ ಕಾರ್ಯಕ್ರಮ
ಹಾಸನ: ಅರಕಲಗೂಡು ತಾಲೂಕಿನ ಮರವಳಲು ಗ್ರಾಮದಲ್ಲಿ ಹಾಸನ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳು ಹಸಿರಲೆ ಗೊಬ್ಬರದ ಮಹತ್ವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಇತ್ತೀಚಿನ ದಿನಗಳಲ್ಲಿ ದುಬಾರಿಯಾಗುತ್ತಿರುವ ಸಾವಯವ ಗೊಬ್ಬರಗಳ ಕೊರತೆಯನ್ನು ನೀಗಿಸಲು ಸ್ಥಳೀಯವಾಗಿ ಲಭ್ಯವಿರುವ ಹಸಿರಲೆ ಗೊಬ್ಬರಗಳಾದ ಅಲಸಂದೆ, ಸೆಣಬು, ಡೈಯೆಂಚ, ಹೊಂಗೆ, ಬೇವು ಹಾಗೂ ಗ್ಲಿರಿಸಿಡಿಯಾಗಳ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಇವುಗಳ ಬಳಕೆಯಿಂದ ಮಣ್ಣಿನ ಆರೋಗ್ಯ ಹಾಗೂ ವಾತಾವರಣ ಸಮತೋಲನವನ್ನು ಕಾಪಾಡಿಕೊಳ್ಳಬಹುದಾಗಿದೆ. ಇದರಿಂದ ಮಣ್ಣಿನ ಫಲವತ್ತತೆ ಹೆಚ್ಚಾಗಿ ಸಾರಜನಕ ಸ್ಥೀರಿಕರಣಕ್ಕೆ ಕೂಡ ಸಹಕಾರಿಯಾಗಿದೆ. ಗ್ರಾಮದ ಮುಖಂಡರಾದ ಕೇಶವೇಗೌಡರು, ಚಂದ್ರೇಗೌಡರು, ಹನುಮಂತೇಗೌಡರು ಹಾಗೂ ಯೋಗೇಶ್, ಶಿಬಿರದ ಮುಖ್ಯಸ್ಥೆ ರಮ್ಯ ಸಂತೋಷ್ ಹಾಗೂ ಶಿಬಿರಾರ್ಥಿಗಳಾದ ಆದರ್ಶ, ಬಿಂದುಶ್ರೀ, ದೇವಿ, ಜೋರಬೀನ್, ಲಕ್ಷ್ಮಿ, ನೌಶದ್, ಪ್ರಿಯಾಂಕ, ಪ್ರಕಾಶ್ ಹಾಗೂ ವಿನುತಾ ಹಾಜರಿದ್ದರು.