ಹಾಸನ

ಕೆರೆಗೆ ತಡೆಗೋಡೆ: ಈಡೇರದ ಭರವಸೆ

-ಪಿ.ರವಿಕುಮಾರ್
ಕನ್ನಡಪ್ರಭ ವಾರ್ತೆ, ಹಾಸನ. ಆ 3
ಜಿಲ್ಲೆಯಲ್ಲಿ ಇರುವ ಸಾಕಷ್ಟು ಕೆರೆಗಳಿಗೆ ತಡೆಗೋಡೆ ಇಲ್ಲದೆ ಅಪಘಾತಕ್ಕೆ ಕಾದು ಕುಳಿತಿದ್ದಾವೆ. ಸುರಕ್ಷತೆಯ ಕ್ರಮಕೈಗೊಳ್ಳುವುದಾಗಿ ಭಾರವಸೆ ನೀಡಿದ್ದ ಸರ್ಕಾರ ಕೈಕಟ್ಟಿ ಕುಳಿತಿದೆ.
 ಎಂಟು ಮಂದಿಯನ್ನು ಬಲಿ ತೆಗೆದುಕೊಂಡ ಬೇಲೂರಿನ ಬಸ್ ದುರಂತ ಸಂಭವಿಸಿ ಕಳೆದ ಜುಲೈಗೆ ಒಂದು ವರ್ಷ ಪೂರ್ಣಗೊಂಡಿದೆ. ಈ ಘಟನೆ ಸಂಭವಿಸಿದ ನಂತರ ಸರ್ಕಾರ ಜಿಲ್ಲೆಯಲ್ಲಿ ಅಪಾಯದಂಚಿನಲ್ಲಿ ಇರುವ ಕೆರೆಗಳಿಗೆ ತಡೆಗೋಡೆಗಳನ್ನು ನಿರ್ಮಿವುದಾಗಿ ಹೇಳಿತ್ತು. ಆದರೆ ಈವರೆಗೂ ಕ್ರಮ ಕೈಗೊಂಡಿಲ್ಲ.
8 ಮಂದಿ ಬಲಿ: ಸಕಲೇಶಪುರದಿಂದ ಬೇಲೂರಿಗೆ ತೆರಳುತ್ತಿದ್ದ ಬಸ್ ಬೆಳಗ್ಗೆ 9.45ರ ಸುಮಾರಿಗೆ ವಿಷ್ಣಸಮುದ್ರ ಕರೆಗೆ ಬಿದ್ದಿತ್ತು. ಬಸ್‌ನಲ್ಲಿದ್ದ 80ಕ್ಕೂ ಅಧಿಕ ಮಂದಿ ಇನ್ನೇನು ಇಳಿಯಲು ಸಜ್ಜಾಗುತ್ತಿದ್ದ ವೇಳೆಗೆ ದುರಂತ ನಡೆದು ಹೋಯಿತು. ಅದರಲ್ಲಿ 8 ಮಂದಿ ನೀರಿನಲ್ಲಿ ಮುಳುಗಿ ಸಾವಪ್ಪಿದರೆ, ಸ್ಥಳೀಯರ ಸಹಾಯ ಹಸ್ತದಿಂದ ಬದುಕುಳಿದ 79 ಮಂದಿ ಗಾಯಾಳುಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು.
ನಂತರ ಸ್ಥಳಕ್ಕೆ ಸರ್ಕಾರದ ಪರವಾಗಿ ಭೇಟಿ ನೀಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಿದರು. ಅಪಘಾತಕ್ಕೆ ಆಹ್ವಾನ ನೀಡುತ್ತಿರುವ ಈ ರೀತಿಯ ಕರೆಗಳ ಪಟ್ಟಿ ಮಾಡಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿ ಹೋದರು. ಮೃತರ ಕುಟುಂಬಗಳು ಪರಿಹಾರ ಪಡೆದಿದ್ದು, ಗಾಯಾಳುಗಳು ಪರಿಹಾರ ಸಿಗದೆ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಒಂದೇ ಕಡೆ ತಡೆಗೋಡೆ: ಅಪಘಾತ ನಡೆದ ವಿಷ್ಣುಸಮುದ್ರ ಕರೆ ಏರಿಗೆ ಒಂದು ಕಡೆ ಮಾತ್ರ ತಡೆಗೋಡೆ ನಿರ್ಮಾಣವಾಗಿದೆ. ಬಸ್ ಬಿದ್ದ ಕೆರೆಯ ಭಾಗಕ್ಕೆ ಮಾತ್ರ ಒಂದೂವರೆ ಅಡಿಯ ತಡೆಗೋಡೆ ನಿರ್ಮಿಸಲಾಗಿದ್ದು, ಗದ್ದೆಹಳ್ಳ ಇರುವ ಇನ್ನೊಂದು ಭಾಗಕ್ಕೆ ಸುರಕ್ಷತೆ ಇಲ್ಲ. ಸಕಲೇಶಪುರ-ಬೇಲೂರು ಮುಖ್ಯ ರಸ್ತೆ ಇದಾಗಿದ್ದು, ನಿತ್ಯ ಸಾವಿರಾರು ವಾಹನ ಸಂಚರಿಸುತ್ತಿವೆ. ಕೆರೆ ಏರಿ ಸುಮಾರು 20 ಅಡಿ ಎತ್ತರವಿದ್ದು, ಇನ್ನೊಂದು ಭಾಗ ಕೂಡ ಅಪಘಾತಕ್ಕೆ ಆಹ್ವಾನ ನೀಡುವಂತಿದೆ.
ತಡೆಗೋಡೆಯೇ ಇಲ್ಲ: ಜಿಲ್ಲೆಯಲ್ಲಿ ಅಪಘಾತಕ್ಕೆ ಹಾತೊರೆದು ಕಾಯುತ್ತಿರುವ ಕೆರೆಗಳ ಸಂಖ್ಯೆ ಸಾಕಷ್ಟಿದ್ದು, ತಡೆಗೋಡೆಯೇ ಇಲ್ಲದೆ ಪ್ರಯಾಣಿಕರು ಜೀವ ಬಿಗಿ ಹಿಡಿದು ಸಂಚರಿಸುತ್ತಿದ್ದಾರೆ. ಹಳೇಬೀಡಿನ ದ್ವಾರಸಮುದ್ರ ಕೆರೆ ಕೂಡ ಒಂದು ಕಿಮೀಗೂ ಅಧಿಕ ಉದ್ದದ ಏರಿ ಹೊಂದಿದ್ದು, ಯಾವ ಭಾಗದಲ್ಲೂ ತಡೆಗೋಡೆ ಇಲ್ಲ. ಒಂದು ಭಾಗಕ್ಕೆ ಮಾತ್ರ ತಡೆಗೋಡೆ ನಿರ್ಮಾಣ ಮಾಡಲು ಈಗಾಗಲೇ ಲೋಕೋಪಯೋಗಿ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಆದರೆ ಕಾಮಗಾರಿ ಆರಂಭಗೊಂಡಿಲ್ಲ.
 ಅದಲ್ಲದೆ ಅಡಗೂರುಕರೆ, ಜಾವಗಲ್, ಕಳಸಿನಕೆರೆ, ಬೇಲೂರು-ಚಿಕ್ಕಮಗಳೂರು ರಾಜ್ಯ ಹೆದ್ದಾರಿಯಲ್ಲೇ ಸಾಕಷ್ಟು ಕರೆ ಏರಿಗಳಿಗೆ ತಡೆಗೋಡೆ ಇಲ್ಲದೆ ನಿತ್ಯ ಅಪಘಾತ ಆಹ್ವಾನಿಸುತ್ತಿವೆ. ಹಾಸನ ತಾಲೂಕಿನ ಹೆರಗು ಕೆರೆ ಕೂಡ ದೊಡ್ಡ ಕೆರೆಗಳ ಪಟ್ಟಿಯಲ್ಲಿದೆ. ಅದರ ಏರಿಯ ಮೇಲೆ ರಸ್ತೆ ಹಾದು ಹೋಗಿದ್ದು, ತಡೆಗೋಡೆ ಇಲ್ಲದ ಪರಿಣಾಮ ಇತ್ತೀಚೆಗೆ ಬಸ್ ಕೆರೆಗೆ ಉರುಳಿ ಬಿದ್ದಿದೆ. ಅದೃಷ್ಟವಶಾತ್ ಕೆರೆಯಲ್ಲಿ ನೀರಿಲ್ಲದ ಕಾರಣ ಪ್ರಯಾಣಿಕರ ಜೀವ ಉಳಿದಿದೆ.
ಕ್ರಮಕ್ಕೆ ಆಗ್ರಹ: ಈ ರೀತಿಯ ಕೆರೆಗಳು ಜಿಲ್ಲೆಯ ಎಲ್ಲ ತಾಲೂಕಿನಲ್ಲೂ ಇದ್ದು, ಬೇಲೂರಿನ ದುರಂತ ಮರುಕಳಿಸುವ ಮುನ್ನ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹ.

ಬೇಲೂರಿನ ವಿಷ್ಣಸಮುದ್ರ ಕರೆಗೆ ಒಂದು ಕಡೆಗೆ ಮಾತ್ರ ತಡೆಗೋಡೆ ನಿರ್ಮಾಣ ಮಾಡಲಾಗಿದೆ ಅಷ್ಟೇ. ಇನ್ನೋಂದು ಭಾಗ ಹಾಗೆ ಖಾಲಿ ಬಿಟ್ಟಿದ್ದಾರೆ. ಈ ರೀತಿಯಾಗಿ ಜಿಲ್ಲೆಯಲ್ಲಿ ಸಾಕಷ್ಟು ಕೆರೆಗಳಿಗೆ ಅವುಗಳಿಗೆ ತಡೆಗೋಡೆ ಇಲ್ಲದೆ ಅಪಾಯಕ್ಕೆ ಅಹ್ವಾನ ನೀಡುತ್ತಿದ್ದಾರೆ. ಸಂಬಂಧಪಟ್ಟರು ಕೂಡಲೇ ತಡೆಗೋಡೆ ನಿರ್ಮಿಸಿ ಸಾರ್ವಜನಿಕರಿಗೆ ಅನಕೂಲ ಮಾಡಿಕೊಡಬೇಕು.
-ಶಿವಣ್ಣ, ಸಾರ್ವಜನಿಕ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!