ಅಜೊಲ್ಲಾ ಉತ್ತಮ ಪಶು ಆಹಾರ
ಹಾಸನ: ಅಜೊಲ್ಲಾ ಒಂದು ಹಸಿರು ಪಾಚಿ(ಆಲ್ಗೆ). ಇದು ನೀರಿನ ಮೇಲೆ ಬೆಳೆಯುತ್ತದೆ. ಸಮೃದ್ದ ಪೋಷಕಾಂಶ ಯುಕ್ತ ಅಜೊಲ್ಲಾ ಒಂದು ಉತ್ತಮ ಪಶು ಆಹಾರ. ಅಜೊಲ್ಲಾದಲ್ಲಿ ಪ್ರೋಟೀನ್ ಅಂಶ ಸುಮಾರು 25-35 ಇರುವುದರಿಂದ ಇದು ಒಂದು ಉತ್ತಮ ಮೇವು ಎಂದು ಜಿಲ್ಲಾ ಕೃಷಿ ಮಹಾ ವಿದ್ಯಾಲಯದ ವಿದ್ಯಾರ್ಥಿಗಳು ಮಾಹಿತಿ ನೀಡಿದರು. ಅಜೊಲ್ಲಾದಲ್ಲಿ ಹೆಚ್ಚು ಪ್ರೋಟೀನ್ ಮತ್ತು ಕಡಿಮೆ ಲಿಗ್ನಿನ್ ಅಂಶಗಳು ಇರುವುದರಿಂದ ಜಾನು ವಾರು ಗಳು ಸುಲಭ ವಾಗಿ ಜೀರ್ಣ ಮಾಡಿಕೊಳ್ಳುತ್ತದೆ.
ಪ್ರಾತ್ಯಕ್ಷಿಕೆ: ಕೃಷಿ ವಿಶ್ವ ವಿದ್ಯಾನಿಲಯ ಬೆಂಗ ಳೂರು, ಕೃಷಿ ಮಹಾ ವಿದ್ಯಾಲಯ ಅಂತಿಮ ಬಿಎಸ್ಸಿ(ಕೃಷಿ)ವಿದ್ಯಾರ್ಥಿಗಳಿಂದ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಡಿಯಲ್ಲಿ ಹಾಸನ ತಾಲೂಕಿನ ಶಾಂತಿ ಗ್ರಾಮ ಹೋಬಳಿಯ ದೊಡ್ಡಚಾಕನಹಳ್ಳಿ ಗ್ರಾಮದಲ್ಲಿ ಅಜೊಲ್ಲಾ ಬೆಳೆಯುವುದನ್ನು ಪದ್ಧತಿ ಪ್ರಾತ್ಯಕ್ಷಿಕತೆ ಮೂಲಕ ವಿದ್ಯಾರ್ಥಿಗಳು ರೈರಿಗೆ ವಿವರಿಸಿದರು.
ಅಜೊಲ್ಲಾದ ಲಾಭಗಳಾದ ಹಾಲು ಕೊಡುವ ಎಮ್ಮೆ ಅಥವಾ ಹಸುಗಳಿಗೆ 0.5 ರಿಂದ 2 ಕೆ.ಜಿ. ಅಜೊಲ್ಲಾವನ್ನು ಕೊಟ್ಟರೆ ಸುಮಾರು 15 ರಿ0ದ 20 ಹಾಲಿನ ಉತ್ಪಾದನೆ ಹೆಚ್ಚುತ್ತದೆ. ಎಮ್ಮೆಗಳಿಗೆ ಅಜೊಲ್ಲಾವನ್ನು ಪ್ರತಿದಿನ ಹಾಕಿದಲ್ಲಿ ಕೊಬ್ಬಿನಾಂಶವು 0.3 ರಿಂದ 0.7 ಹೆಚ್ಚಾಗುವುದು. ಪಶು ಆಹಾರವಾಗಿ
ಅಜೊಲ್ಲಾ ವನ್ನು ಕೊಟ್ಟಾಗ ಬರೀ ಹಾಲಿನ ಗುಣಮಟ್ಟ ಮಾತ್ರವಲ್ಲದೆ ಪಶುವಿನ ಆರೋಗ್ಯ ಸಹ ಚೆನ್ನಾಗಿರುತ್ತದೆ, ಅಜೊಲ್ಲಾವನ್ನು ಉಪ ಯೋಗಿಸುವುದರಿಂದ ಮಾಂಸದ ಕೋಳಿಗಳಲ್ಲಿ ದೇಹದ ತೂಕವು ಹೆಚ್ಚುವುದು ಮತ್ತು ಮೊಟ್ಟೆ ಕೋಳಿಗಳಲ್ಲಿ ಮೊಟ್ಟೆಗಳ ಉತ್ಪತ್ತಿ ಅಧಿಕವಾಗುತ್ತದೆ ಎಂದು ತಿಳಿಸಿದರು.