ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಎಂಇಎಸ್ ನಿಷೇಧಕ್ಕೆ ಒತ್ತಾಯಿಸಿ ಪ್ರತಿಭಟನೆ

Rashmi Kasaragodu
Updated On : 4 Aug 2014, 11:35 am

ಹಾಸನ: ರಾಜ್ಯದಲ್ಲಿ ಪದೇ ಪದೇ ಪುಂಡಾಟಿಕೆ ತೋರುವ ಮೂಲಕ ರಾಜ್ಯದ ಸಾಮರಸ್ಯ ಕದಡುವ ಕೀಟಲೆ ಕೆಲಸ ಮಾಡಿತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್)ಯನ್ನು ನಿಷೇಧಿಸುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
 ಜಿಲ್ಲಾ ಡಾ.ರಾಜಕುಮಾರ್ ಅಭಿಮಾನಿಗಳ ಸಂಘ, ಕರ್ನಾಟಕ ಕಾವಲು ಪಡೆ, ಕರ್ನಾಟಕ ವೀರಕನ್ನಡಿಗರ ಸೇನೆ, ದೇವರಾಜ ಅರಸ್ ಮಾರ್ಕೆಟ್‌ನ ಬಾಳೆಹಣ್ಣು ವರ್ತಕರ ಸಂಘ ಹಾಗೂ ಇತರೆ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ನಗರದ ಹೇಮಾವತಿ ಪ್ರತಿಮೆಯಿಂದ ಮೆರವಣಿಗೆ ಪ್ರಾರಂಭಿಸಿ ಎನ್‌ಆರ್ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ಡಾ.ರಾಜ್ ಅಭಿಮಾನಿಗಳ ಸಂಘ: ರಾಜ್ಯದ ಗಡಿ ಜಿಲ್ಲೆಯಾಗಿರುವ ಬೆಳಗಾವಿಯ ಯಳ್ಳೂರಿನ ನ್ಯಾಯಾಲಯದ ಆದೇಶದಂತೆ ಮರಾಠಿ ಭಾಷೆಯಲ್ಲಿದ್ದ ನಾಮಫಲಕವನ್ನು ತೆರವುಗೊಳಿಸಲಾಗಿತ್ತು. ಆದರೆ ಎಂಇಎಸ್ ಕಾರ್ಯಕರ್ತರು ಪುನಃ ತೆರವುಗೊಳಿಸದ ಜಾಗದಲ್ಲೇ ಮತ್ತೆ ಮರಾಠಿ ಭಾಷೆಯ ನಾಮಫಲಕವನ್ನು ಹಾಕಿ ನ್ಯಾಯಾಲಯದ ಆದೇಶ ಧಿಕ್ಕರಿಸುವ ಮೂಲಕ ಕನ್ನಡ ನಾಡಿಗೆ ದ್ರೋಹ ಬಗೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
 ಕನ್ನಡ ನಾಡಿನ ನೆಲ-ಜಲ-ಭಾಷೆಯನ್ನು ಗೌರವಿಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದೆ. ಕರ್ನಾಟಕದ ನೆಲದಲ್ಲಿ ವಾಸಿಸುತ್ತಿರುವ ಎಂಇಎಸ್ ಸಂಘಟನೆಯವರು ಕನ್ನಡನಾಡಿಗೆ ದ್ರೋಹ ಬಗೆಯುತ್ತಿದ್ದಾರೆ. ಆದ್ದರಿಂದ ಕರ್ನಾಟದಲ್ಲಿ ಎಂಇಎಸ್ ಸಂಘಟನೆಯನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಅಧ್ಯಕ್ಷ ಪ್ರಶಾಂತ್, ನಾಗರಾಜ್, ಬಾಳ್ಳುಗೋಪಾಲ್, ಮೂಯೂರ್, ಎಸ್.ಮಂಜುನಾಥ್ ಶರ್ಮಾ, ಅನಿಲ್, ಅರುಣ್, ರಾಘವೇಂದ್ರ, ರಮೇಶ್ ಹಾಗೂ ಇತರರು ಇದ್ದರು.
ಎಂಇಎಸ್ ನಿಷೇಧಿಸಿ: ಕರ್ನಾಟಕ ಕಾವಲು ಪಡೆ ಮತ್ತು  ಕರ್ನಾಟಕ ವೀರಕನ್ನಡಿಗರ ಸೇನೆ ಪ್ರತಿಭಟನೆ ನಡೆಸಿ, ರಾಜ್ಯದಲ್ಲಿ ಇರುವ ನಾಡದ್ರೋಹಿ ಎಂಇಎಸ್ ಸಂಘಟನೆಯನ್ನು ನಿಷೇಧಿಸಲು ಆಗ್ರಹಿಸಿತು.
 ಕರ್ನಾಟಕದ ಅವಿಭಾಜ್ಯ ಅಂಗವಾಗಿರುವ ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ ನಡೆಸಿ ಭುವನೇಶ್ವರಿ ಭಾವಚಿತ್ರಕ್ಕೆ ಹಾಗೂ ಕನ್ನಡದ ಭಾವುಟವನ್ನು ಸುಟ್ಟು ಹಾಕುವ ಮೂಲಕ ಕನ್ನಡಿಗರ ಭಾವನೆಯನ್ನು ಕೆರಳಿಸಿರುವ ಎಂಇಎಸ್ ಸಂಘಟನೆಯನ್ನು ನಿಷೇಧಿಸುವಂತೆ ಒತ್ತಾಯಿಸಿ  ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
 ಪ್ರತಿಭಟನೆಯಲ್ಲಿ ಕಾವಲು ಪಡೆಯ ಅಧ್ಯಕ್ಷ ನವೀನ್ ಕುಮಾರ್, ಭಾನುಪ್ರಕಾಶ್, ಪ್ರಸಾದ್, ಸೈಯದ್ ಎಜಾಸ್, ಕರ್ನಾಟಕ ವೀರಕನ್ನಡಿಗರ ಸೇನೆಯ ಜಿಲ್ಲಾಧ್ಯಕ್ಷ ಎಚ್.ಎನ್.ನಟೇಶ್, ರಾಜ್ಯ ಉಪಾಧ್ಯಕ್ಷ ತಾಜಿಂ ಪಾಷ, ಸಹ ಕಾರ್ಯದರ್ಶಿ ಆನಂದ್, ಸಂಘಟನಾ ಕಾರ್ಯದರ್ಶಿ  ರಾಜು, ಕಾರ್ಮಿಕ ಘಟಕ ಅಧ್ಯಕ್ಷ ಆರೀಫ್, ಡಿ.ಶಂಕರಗೌಡ, ಆಟೋ ಘಟಕದ ಅಧ್ಯಕ್ಷ ದಿನೇಶ್ ಕುಮಾರ್ ಹಾಗೂ ಇತರರು ಇದ್ದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement