ಕರಗಡ ಯೋಜನೆ ಇನ್ನು 3 ತಿಂಗಳಲ್ಲಿ ಪೂರ್ಣ
ಬೇಲೂರು: ಚಿಕ್ಕಮಗಳೂರು ಜಿಲ್ಲೆಗೆ ಯಗಚಿ ನೀರು ಹರಿಸುವ ಕರಗಡ ಕುಡಿಯುವ ನೀರಿನ ಯೋಜನೆಯ ನಾಲೆ ಕಾಮಗಾರಿಯನ್ನು ಮೀನುಗಾರಿಕೆ ಸಚಿವ ಕೆ.ಅಭಯಚಂದ್ರ ಇತ್ತೀಚೆಗೆ ವೀಕ್ಷಿಸಿದರು.
ಕಾಮಗಾರಿ: ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನಾಲೆ ಕಾಮಗಾರಿ ಪ್ರಗತಿಯಲ್ಲಿದೆ. 3 ತಿಂಗಳಲ್ಲಿ ನಾಲೆ ಕಾಮಗಾರಿ ಪೂರ್ಣಗೊಳಿಸಿ ಪರೀಕ್ಷಾರ್ಥವಾಗಿ ನೀರು ಹರಿಸಲಾಗುವುದು. ನಾಲೆ ಬದಿಯ ಗ್ರಾಮಗಳಿಗೆ ತೆರಳಲು ಅನುಕೂಲ ಆಗುವಂತೆ 9 ಸೇತುವೆಗಳನ್ನು ನಿರ್ಮಿಸಬೇಕಿದ್ದು ಅವುಗಳನ್ನು ಸಹ ಶೀಘ್ರ ನಿರ್ಮಿಸಿ ಕೊಡುವುದಾಗಿ ಗುತ್ತಿಗೆದಾರರು ತಿಳಿಸಿದ್ದಾರೆ ಎಂದರು.
ಎಂಎಲ್‌ಸಿ ಗಾಯಿತ್ರಿ ಶಾಂತೇ ಗೌಡ, ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್, ಎಡಿಸಿ ವೈಶಾಲಿ, ಎಂಜಿನಿಯರ್ ಕೃಷ್ಣಮೂರ್ತಿ ಬೇಲೂರು ಪಿಎಸ್‌ಐ ಆನಂದ ಕುಮಾರ್ ಇತರರು ಇದ್ದರು.