ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಬಿ.ಸಿ. ರಾಯ್ ಸ್ಮರಣಾರ್ಥ ವೈದ್ಯರ ದಿನ ಆಚರಣೆ

Rashmi Kasaragodu
Updated On : 4 Aug 2014, 11:36 am

ಹಾಸನ: ಜನರ ಆರೋಗ್ಯಕ್ಕೆ ತಮ್ಮ ಜೀವನವನ್ನೇ ತ್ಯಾಗಮಾಡಿದ ಪಶ್ಚಿಮ ಬಂಗಾಳದ 2 ನೇ ಮುಖ್ಯಮಂತ್ರಿ ಡಾ. ಬಿ.ಸಿ. ರಾಯ್ ಸ್ಮರಣಾರ್ಥ ವೈದ್ಯರ ದಿನವನ್ನು ಆಚರಿಸಲಾಗುತ್ತಿದೆ ಎಂದು ಡಾ. ರಾಘವೇಂದ್ರ  ಅಭಿಪ್ರಾಯಪಟ್ಟರು.
 ಭಾರತ ಜ್ಞಾನ ವಿಜ್ಞಾನ ಸಮಿತಿ ಶಾಂತಿನಗರ ಘಟಕದ ಕೋಟ್ರೇಶ್ ಉಪ್ಪಾರ್ ಅವರ ಮನೆಯಲ್ಲಿ ಏರ್ಪಡಿಸಿದ್ದ ಮಾಸಿಕ ಅನಿಸಿಕೆ-ಅಭಿವ್ಯಕ್ತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಿಕಿತ್ಸೆಯಲ್ಲಿ ವೈದ್ಯ, ರೋಗಿ ಪರಿಚಾರಕ, ಔಷಧಿ ಎಂದು 4 ಹಂತಗಳಿದ್ದು ಇವುಗಲ್ಲಿ ವೈದ್ಯರದ್ದು ಅತಿ ಮುಖ್ಯವಾದ ಪಾತ್ರ ಎಂದು ಹೇಳಿದರು.
ಋತು ಸಂಧಿ: ಆಯುರ್ವೇದದಲ್ಲಿ ಪಂಚಕರ್ಮವನ್ನು ಹೆಚ್ಚು ಬಳಸಿಕೋಳ್ಳತ್ತವೆ, ಮನುಷ್ಯನ ಆರೋಗ್ಯವನ್ನು ಸಮಸ್ಥಿತಿಗೆ ತರಲು ಸಹಾಯವಾಗುತ್ತದೆ. ಎಲ್ಲಾ ಋತುಗಳ ಬದಲಾವಣೆಯಲ್ಲಿ ಋತು ಸಂಧಿ ಇರುತ್ತದೆ. ಇದರಲ್ಲಿ ನಮ್ಮ ಆರೋಗ್ಯ ಸರಿಪಡಿಸಿಕೊಂಡರೆ, ಆ ಋತುವಿನಲ್ಲಿ ನಮಗೆ ಯಾವ ರೀತಿಯ ಕಾಯಿಲೆಗಳು ಬರುವುದಿಲ್ಲ ಎಂದು ಸಲಹೆ ನೀಡಿದರು.  ಜಿಲ್ಲಾ ಉಪಾಧ್ಯಕ್ಷ ಅಹಮದ್ ಇದ್ದರು, ಚುಡಾಮಣಿ, ಲೀಲಾ, ಮಾಣಿಕ್ಯ,  ಪದ್ಮ ಮಂಜುನಾಥ್, ಪದ್ಮ ವೆಂಕಟೇಶ್, ಕೋಟ್ರೇಶ್ ಉಪ್ಪಾರ್, ಕವನ ವಾಚನ ಮಾಡಿದರು, ಸಂಚಾಲಕಿ ಪದ್ಮ ಮಂಜುನಾಥ್ ಸ್ವಾಗತಿಸಿದರು. ಜಯಪ್ರಕಾಶ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement