ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಾಹಿತ್ಯದ ಪಾತ್ರ ಸ್ಮರಣೀಯ

Rashmi Kasaragodu
Updated On : 4 Aug 2014, 11:35 am

ಹಾಸನ: ಭಾರತದ ಸ್ವಾತಂತ್ರ್ಯ ಸಂಗ್ರಾಮದ ಅವಧಿಯಲ್ಲಿ ಅನೇಕ ಸಾಹಿತಿಗಳು ತಮ್ಮ ಅಮೋಘ ಕೊಡುಗೆ ಕೊಟ್ಟಿದ್ದಾರೆ ಡಾ. ರಾಜಶೇಖರ್ ಮಠಪತಿ ಸ್ಮರಿಸಿದರು.
 ಅರವಿಂದ ಘೋಷ್, ರವೀಂದ್ರನಾಥ ಠ್ಯಾಗೋರ್, ಬಂಕಿಮಚಂದ್ರ ಚಟರ್ಜಿ, ಇಬ್ರಾಹಿಂ, ಇಕ್ಬಾಲ್, ಖುಷ್ವಂತ್ ಸಿಂಗ್, ಆರ್.ಕೆ. ನಾರಾಯಣ, ಅಮೃತ ಪ್ರಿಯತಂ ಮುಂತಾದ  ದಿಗ್ಗಜರು ಅತ್ಯದ್ಭುತ ಕೊಡುಗೆ ನೀಡಿದ್ದಾರೆ ಎಂದರು.
ಮನೆ ಮನೆ ಕವಿಗೋಷ್ಠಿ: ಹಾಸನದ ರಂಗೋಲಿ ಹಳ್ಳದಲ್ಲಿರುವ ಯೋಗ ಗುರು ಸುರೇಶ್ ಗೂರೂಜಿ ಅವರ ಪ್ರಾಯೋಜಕತ್ವದಲ್ಲಿ ವ್ಯಕ್ತಿತ್ತ್ವ ವಿಕಸನ ಕೇಂದ್ರದಲ್ಲಿ ಭಾನುವಾರ ನಡೆದ 209ನೆಯ ಮನೆ ಮನೆ ಕವಿಗೋಷ್ಠಿಯಲ್ಲಿ ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಇಸ್ಲಾಮಿಕ್ ಸಾಹಿತ್ಯ ವಿಷಯವಾಗಿ ಉಪನ್ಯಾಸ ನೀಡಿದರು.
 ಸ್ವಾತಂತ್ರ್ಯ ಸಂಗ್ರಾಮದ ಒಂದೆರಡು ದಶಕದ ಹಿಂದುಮುಂದು ಹುಟ್ಟಿದಂತಹ ಪ್ರಬುದ್ಧ ಸಾಹಿತ್ಯ ಮತ್ಯಾವ ಕಾಲ ಘಟ್ಟದಲ್ಲಿಯೂ ರಚನೆಯಾಗಲಿಲ್ಲ. ಹಿಂದೂ ಇಸ್ಲಾಂ ಸೇರಿ ಸೂಫಿ ಚಳವಳಿ ಹುಟ್ಟಿತು. ಕೆ.ಎಂ. ಅಬ್ಬಾಸ್ ಅವರ ಕೊಡುಗೆ ಅತ್ಯಮೂಲ್ಯವಾದುದು ಎಂದರು.
ಕವಿತೆ ವಾಚನ: ನಾ ಮೆಚ್ಚಿದ ಕವಿತೆ ಬಗ್ಗೆ ಡಾ.ಕೆ.ಕೆ. ಜಯಚಂದ್ರಗುಪ್ತ ಮಾತನಾಡಿದರು. ನಂತರ ನಡೆದ ಕವಿ ಗೋಷ್ಠಿಯಲ್ಲಿ ಸಂಚಾಲಕ ಕೊಟ್ರೇಶ್ ಎಸ್. ಉಪ್ಪಾರ್, ಎನ್.ಎಲ್. ಚನ್ನೇಗೌಡ, ಚಂದ್ರಕಾಂತ ಪಡೆಸೂರ, ಸುಶೀಲ ಸೋಮಶೇಖರ್, ಶ್ರೀವಿಜಯ ಹಾಸನ, ನವಾಬಬ್ಬೇಲೂರು, ಭಾರತಿ ಹಾದಿಗೆ, ಪವನ್ ಆಲೂರು, ವಾಸು ಸಮುದ್ರವಳ್ಳಿ, ಚೂಡಾಮಣಿ, ಸರೋಜ, ಲಲಿತ, ಬಿ. ವೇದಾವತಿ, ಗೊರೂರು ಅನಂತರಾಜು, ಮನೋಹರ ತಿಪಟೂರು, ಸಾತ್ವಿಕ್, ಪ್ರಮೋದ್ ಬಳಗೋಡು ಮುಂತಾದವರು ಕವಿತೆ ವಾಚಿಸಿದರು. ಕಾರ್ಯಕ್ರಮದಲ್ಲಿ ಎಚ್.ಆರ್. ಮಂಜಪ್ಪಗೌಡ, ತುಳಸಿಯಮ್ಮ, ಜಯದೇವಪ್ಪ, ಪದ್ಮಶ್ರೀ ಮಠಪತಿ, ದ್ಯಾವನೂರು ಮಂಜುನಾಥ, ಸುರೇಶ್ ಗುರೂಜಿ, ಚಿನ್ನೇನಹಳ್ಳಿ ಸ್ವಾಮಿ ಇತರರು ಇದ್ದರು.
 ಸಂಚಾಲಕ ಕೊಟ್ರೇಶ್ ಎಸ್. ಉಪ್ಪಾರ್ ನಿರೂಪಿಸಿದರು, ಚಂದ್ರಕಾಂತ ಪಡೆಸೂರ ಸ್ವಾಗತಿಸಿದರು, ಸುರೇಶ್ ಗುರೂಜಿ ಪ್ರಾರ್ಥಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement