ಹಾಸನ: ದಲಿತ ಸಂಘಟನೆ ಆಶ್ರಯದಲ್ಲಿ ದಲಿತ ಹಿಂದುಳಿತ ಅಲ್ಪಸಂಖ್ಯಾತ ಐಕ್ಯತಾ ಸಮಾವೇಶ ಮತ್ತು ದೇವನಾಂಪ್ರಿಯ ಅಶೋಕ ನಾಟಕ ಪ್ರದರ್ಶನವನ್ನು ಆ. 11 ರಂದು ನಗರದ ಕಲಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಸತೀಶ್ ಜಾರಕಿಹೊಳಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಚಿವ ವಿ. ಶ್ರೀನಿವಾಸ್ ಪ್ರಸಾದ್, ಸಚಿವ ಎಚ್. ಆಂಜನೇಯ, ಕೆ.ಪಿ.ಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ಸಚಿವ ಶಿವರಾಜ್ ತಂಗಡಗಿ, ಕಾರ್ಮಿಕ ಸಚಿವ ಪರಮೇಶ್ವರ್ ನಾಯಕ್, ಆಲೂರು ಸಕಲೇಶಪುರ ಶಾಸಕ ಎಚ್.ಕೆ. ಕುಮಾರಸ್ವಾಮಿ ಭಾಗವಹಿಸಲಿದ್ದಾರೆ.