ಪೊಲೀಸರ ಕ್ರಮ ಖಂಡಿಸಿ ಹೆಚ್ಚುವರಿ ಡಿಸಿಗೆ ಮನವಿ
ಹಾಸನ: ಪ್ರಕೃತಿ ಸಮುದಾಯ ಸೇವಾ ಸಂಸ್ಥೆಯ ಮೂವರು ಕಾರ್ಯಕರ್ತರನ್ನು ಕಾರಣ ನೀಡಿದೆ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸುವುದನ್ನು ಖಂಡಿಸಿ ಸಂಸ್ಥೆಯ ಕಾರ್ಯಕರ್ತರು ಸೋಮವಾರ ಹೆಚ್ಚುವರಿ ಜಿಲ್ಲಾಧಿಕಾರಿ ಗೋಪಾಲಕೃಷ್ಣ ಅವರಿಗೆ ಮನವಿ ನೀಡಿದ್ದಾರೆ.
ಆ.2ರಂದು ಮೂವರು ಕಾರ್ಯಕರ್ತರನ್ನು ಸಂಸ್ಥೆಯಿಂದ ಪೊಲೀಸರು ಕರೆದುಕೊಂಡು ಹೋಗಿದ್ದಾರೆ. ಈ ಬಗ್ಗೆ ಸಂಸ್ಥೆಗೆ ಪೊಲೀಸರು ಮಾಹಿತಿಯನ್ನು ನೀಡದೆ ಏಕಾಏಕಿ ವಿಚಾರಣೆಗೆಂದು ಕರೆದುಕೊಂಡು ಹೋಗಿದ್ದು, ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ವಿಚಾರಿಸಿದರೆ ಪೊಲೀಸ್ ಅಧಿಕಾರಿಗಳು ಸರಿಯಾಗಿ ಮಾಹಿತಿಯನ್ನು ನೀಡುತ್ತಿಲ್ಲ. ಅಲ್ಲದೆ ವಿಚಾರಣೆಯನ್ನು ಪೊಲೀಸ್ ಠಾಣೆಯಲ್ಲಿ ನಡೆಸದೆ ವಸತಿಗೃಹವೊಂದರಲ್ಲಿ ವಿಚಾರಣೆಯನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಆದ್ದರಿಂದ ಕೂಡಲೇ ಸಂಸ್ಥೆಯ ಮೂವರು ಕಾರ್ಯಕರ್ತರನ್ನು ಬಿಡಬೇಕು, ದೌರ್ಜನ್ಯ ಎಸಗುತ್ತಿರುವ ಪೊಲೀಸರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಮನವಿ ನೀಡಿದರು.
ಈ ಸಂದರ್ಭದಲ್ಲಿ ಸಂಗಮ ಸೇವಾ ಸಂಸ್ಥೆಯ ನಿಶಾ, ರೂಪ ಹಾಗೂ ಇತರರು ಇದ್ದರು.