ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ರೈತರಿಗೆ ಪರಿಹಾರ ನೀಡಲು ಆಗ್ರಹ

Rashmi Kasaragodu
Updated On : 6 Aug 2014, 12:57 pm

ಹಾಸನ: ಅರಕಲಗೂಡು ತಾಲೂಕನ್ನು 2013-14ನೇ ಸಾಲಿನ ಅತಿವೃಷ್ಟಿ ಮತ್ತು ಅನಾವೃಷ್ಟಿ ಪ್ರದೇಶವೆಂದು ಘೋಷಣೆ ಮಾಡಿದ್ದರೂ, ಇದುವರೆಗೂ ಸರ್ಕಾರ ರೈತರ ಪರಿಹಾರ ನೀಡಿಲ್ಲ ಎಂದು ರೈತ ಮುಖಂಡ ಹೋ.ತಿ.ಹುಚ್ಚಪ್ಪ ಆರೋಪಿಸಿದರು.
 ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ 2013-14ನೇ ಸಾಲಿನಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿ ಉಂಟಾಗಿದೆ ಎಂದು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಿಳು ಸರ್ಕಾರಕ್ಕೆ ವರದಿಯನ್ನು ನೀಡಿದ್ದಾರೆ. ಈ ಬಗ್ಗೆ ಸಚಿವ ಸಂಪುಟದಲ್ಲೂ ಸಹ ಚರ್ಚೆಯಾಗಿದೆ. ಆದರೆ ಈ ವರೆಗೂ ರೈತರಿಗೆ ಪರಿಹಾರ ದೊರತಿಲ್ಲ ಎಂದು ದೂರಿದರು.
ಪರಿಹಾರ ತಲುಪಿಲ್ಲ: ಅರಕಲಗೂಡು-ಬೇಲೂರು ತಾಲೂಕುಗಳನ್ನು ಅನಾವೃಷ್ಟಿ ತಾಲೂಕು ಎಂದು ಗುರುತಿಸಿ 23 ಕೋಟಿ ರು.ಗಳನ್ನ ಹಣವನ್ನು ಬಿಡುಗಡೆ ಮಾಡಲಾಗಿತ್ತು. ಆದರೆ ಈ ಹಣ ರೈತರಿಗೆ ತಲುಪಿಲ್ಲ. ರೈತರ ಹಣವನ್ನು ಅಧಿಕಾರಿಗಳು ನುಂಗಿ ಹಾಕಿದ್ದಾರೆ ಎಂದು ಕಿಡಿಕಾರಿದರು.   ಆದ್ದರಿಂದ ಅತಿವೃಷ್ಟಿ ಹಾಗೂ ಅನಾವೃಷ್ಟಿಯಂದ ತುತ್ತಾಗಿರುವ ರೈತರಿಗೆ ಪರಿಹಾರವನ್ನು ನೀಡಬೇಕು ಎಂದು ಒತ್ತಾಯಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement