ವಿದೇಶಿ ಮಹಿಳೆ ಮೂಳೆ ಮುರಿತ
ಬೇಲೂರು: ವಿದೇಶಿ ಮಹಿಳಾ ಪ್ರವಾಸಿಯೊಬ್ಬರು ಚೆನ್ನಕೇಶವಸ್ವಾಮಿ ದೇಗುಲ ಒಳಾಂಗಣ ವೀಕ್ಷಣೆ ಮಾಡುವಾಗ ಪಾಚಿ ಮೇಲೆ ಕಾಲಿಟ್ಟು ಜಾರಿ ಬಿದ್ದು ಮೂಳೆ ಮುರಿದುಕೊಂಡಿದ್ದಾರೆ. ಇಟಲಿ ದೇಶದ ಇಸ್ಪರ್ ಹ್ಯೂಸ್ (55) ಕಲ್ಲು ಹಾಸಿನ ಪಾಚಿ ಮೇಲೆ ಕಾಲಿಟ್ಟು ಜಾರಿ ಬಿದ್ದಿದ್ದಾರೆ. ಬಿದ್ದ ಜಾಗದಿಂದ ಮೇಲೇಳಲಾಗದ ಸ್ಥಿತಿಯಲ್ಲಿ ಕಾಲು ಗಂಟೆಗೂ ಹೆಚ್ಚು ಕಾಲ ಅಲ್ಲೇ ಮಲಗಿದ್ದರು. ಜೊತೆಯಲ್ಲೇ ಇದ್ದ ಸಂಬಂಧಿಕರು ಆಕೆಯನ್ನು 108 ರಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಕಾಲಿನ ಮೂಳೆ ಮುರಿದಿದ್ದು ಶಸ್ತ್ರ ಚಿಕಿತ್ಸೆಯ ಅವಶ್ಯಕತೆ ಇರುವುದಾಗಿ ವೈದ್ಯರು ತಿಳಿಸಿದರು. ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ಬೆಂಗಳೂರಿಗೆ ಕರೆದೊಯ್ಯಲಾಗಿದೆ.