ಹಾಸನ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಸರ್ಕಾರಿ ಕಾನೂನು ಕಾಲೇಜು ಹಾಗೂ ಜಿಲ್ಲಾ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಕಟ್ಟಡ ಕಾರ್ಮಿಕರಿಗಾಗಿ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಆ.7ರಂದು ಬೆಳಿಗ್ಗೆ 9.30ಕ್ಕೆ ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಏರ್ಪಡಿಸಲಾಗಿದೆ.
ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಆರ್.ಜೆ.ಸತೀಶ್ ಸಿಂಗ್ ಕಾರ್ಯಕ್ರಮವನ್ನು ಉದ್ಘಾಟಿಸವರು. ಉಪಕಾರ್ಮಿಕ ಆಯುಕ್ತ ಡಾ. ಸಿ.ಎಚ್. ಬಾಲಕೃಷ್ಣ ಅಧ್ಯಕ್ಷತೆ ವಹಿಸುವರು. ವಕೀಲರ ಸಂಘದ ಅಧ್ಯಕ್ಷ ಬಿ.ಚಂದ್ರಶೇಖರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕಾರ್ಮಿಕ ಅಧಿಕಾರಿ ಕೆ.ಎನ್.ಪ್ರಹ್ಲಾದ್ ಮತ್ತು ವಕೀಲ ಎಸ್.ಕೆ.ಭಾನುಮುಸ್ತಾಕ್ ಉಪನ್ಯಾಸ ನೀಡುವರು.
ಕಾರ್ಮಿಕ ಭವಿಷ್ಯನಿಧಿ ಅದಾಲತ್:11ರಂದು
ಹಾಸನ: ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ, ಶ್ರಮ ಮಂತ್ರಾಲಯ, ಭಾರತ ಸರಕಾರವು ತನ್ನ ಉಪ ಕ್ಷೇತ್ರೀಯ ಕಚೇರಿಯನ್ನು ಯಶೋರಾಮ್ ಚೇಂಬರ್ಸ್, ರತ್ನಗಿರಿ ರಸ್ತೆ, ಚಿಕ್ಕಮಗಳೂರಿನಲ್ಲಿ ಹೊಂದಿದೆ. ಕ್ಷೇತ್ರೀಯ ಭವಿಷ್ಯನಿಧಿ ಆಯುಕ್ತರು ಆ.11, 2014 ರಂದು ಭವಿಷ್ಯನಿಧಿ ಅದಾಲತನ್ನು ನಡೆಸುವರು. ಭವಿಷ್ಯನಿಧಿ ಉದ್ಯೋಗದಾತರು ಮತ್ತು ಸದಸ್ಯರು ತಮ್ಮ ದೂರುಗಳೇನಾದರೂ ಇದ್ದಲ್ಲಿ ಅರ್ಜಿಯನ್ನು ಆ.11, 2014 ರ ಬೆಳಿಗ್ಗೆ 11 ಗಂಟೆಗೆ ಅಥವಾ ಆ.8, 2014 ರೊಳಗೆ ಅಂಚೆಯ ಮೂಲಕ ನೋಂದಾಯಿಸಲು ಕೋರಿದ್ದಾರೆ. ಸದಸ್ಯರು ಹಾಗೂ ಉದ್ಯೋಗದಾತರು ಇಲ್ಲಿ ತಮ್ಮ ದೂರುಗಳನ್ನು ನೋಂದಾಯಿಸಬಹುದು. ನೋಂದಾಯಿಸಿದ ದೂರುಗಳನ್ನು 30 ದಿನಗಳೊಳಗೆ ಇತ್ಯರ್ಥ ಮಾಡಿಕೊಡುವಂತೆ ಕ್ರಮ ಕೈಗೊಳ್ಳಲಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ಚಿಕ್ಕಮಗಳೂರು ಗ್ರಾಹಕ ಸೇವಾ ಕೇಂದ್ರದ ಕ್ಷೇತ್ರೀಯ ಭವಿಷ್ಯನಿಧಿ ಆಯುಕ್ತರಾದ ಪ್ರಭಾವತಿ ಬಿ. ಜೋಶಿ ದೂ. 08262-234106, ಫ್ಯಾಕ್ಸ್. 08262-237426, ಇವರನ್ನು ಸಂಪರ್ಕಿಸಲು ಕೋರಿದ್ದಾರೆ.
ಐಎಎಸ್ ಪರೀಕ್ಷಾ ಪೂರ್ವ ತರಬೇತಿ
ಹಾಸನ: ಸಮಾಜ ಕಲ್ಯಾಣ ಇಲಾಖಾವತಿಯಿಂದ ಪಜಾತಿ ಮತ್ತು ಪ.ಪಂಗಡದ ಅಭ್ಯರ್ಥಿಗಳಿಗೆ ಐಎಎಸ್ ಐಪಿಎಸ್ ಪರೀಕ್ಷಾ ಪೂರ್ವ ತರಬೇತಿಗಾಗಿ ಪ್ರತಿಷ್ಠಿತ ತರಬೇತಿ ಸಂಸ್ಥೆಗಳಿಗೆ ನಿಯೋಜಿಸಲು ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆ.10 ರಂದು ಭಾನುವಾರ ಬೆಳಿಗ್ಗೆ 10 ಗಂಟೆಯಿಂದ 12. ಗಂಟೆಯವರೆಗೆ ಸಾಮಾನ್ಯ ಪ್ರವೇಶ ಪರೀಕ್ಷೆ ಏರ್ಪಡಿಸಲಾಗಿದೆ. ಹೆಚ್ಚಿನ ವಿವರಗಳಿಗೆ ಇಲಾಖೆಯನ್ನು ಸಂಪರ್ಕಿಸುವಂತೆ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ನಾಗರಾಜ್
ಅವರು ತಿಳಿಸಿದ್ದಾರೆ.