ಹಾಸನ: ಕಾರ್ಮಿಕರ ಭವಿಷ್ಯನಿಧಿ ಸಂಸ್ಥೆ ತಮ್ಮ ಚಂದಾದಾರರಿಗೆ ವಿಶ್ವವ್ಯಾಪಿ ಖಾತಾ ಸಂಖ್ಯೆ ವಿತರಿಸುತ್ತಿದೆ. ಇದನ್ನು ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ತರುವಲ್ಲಿ ಅಗತ್ಯವಾದ ಆಧಾರ್ ಕಾರ್ಡ್ ಸಂಖ್ಯೆ, ಪಾಸ್ಪೋರ್ಟ್ ಸಂಖ್ಯೆ, ಬ್ಯಾಂಕ್ ಖಾತಾ ಸಂಖ್ಯೆ ಮುಂತಾದ ಮಾಹಿತಿಗಳನ್ನು ವಿಲೀನ ಗೊಳಿಸಬೇಕಾಗಿದೆ. ಭವಿಷ್ಯನಿಧಿ ಕಾಯಿದೆಗೊಳಪಟ್ಟ ಸಂಸ್ಥೆಗಳ ಉದ್ಯೋಗದಾತರು ತಕ್ಷಣ ಗಿಗಿಗಿ.ಜಠಜ್ಝಿಟಿಜ್ಝಛ.್ಜ್ಟಢ.್ಝಟಿ ನಲ್ಲಿ ನೀಡಲಾದ ಸೂಚನೆಯಂತೆ ತಮ್ಮ ಉದ್ಯೋಗಿಗಳ ಮಾಹಿತಿಗಳನ್ನು ರವಾನಿಸಿ ಸಹಕರಿಸಬೇಕೆಂದು ಚಿಕ್ಕಮಗಳೂರು ಕ್ಷೇತ್ರೀಯ ಭವಿಷ್ಯನಿಧಿ ಆಯುಕ್ತರಾದ ಪ್ರಭಾವತಿ ಬಿ. ಜೋಶಿ ಕೋರಿದ್ದಾರೆ.