ಬೇಲೂರು: ಜಿಲ್ಲೆ ಸೇರಿದಂತೆ ಇತರೆಡೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಇಲ್ಲಿನ ಚೆನ್ನಕೇಶವಸ್ವಾಮಿ ದೇಗುಲಕ್ಕೆ ಭೇಟಿ ನೀಡುವವರ ಸಂಖ್ಯೆ ಇಳಿಮುಖವಾಗಿದೆ.
ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ ಪುಣ್ಯಕ್ಷೇತ್ರಗಳಿಗೆ ಭೇಟಿ ಕೊಡುವವರ ಸಂಖ್ಯೆ ಹೆಚ್ಚಾಗುತ್ತದೆ. ಆದರೆ ಜಿಲ್ಲೆ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಹಾಗು ಉತ್ತರ ಕನ್ನಡದಲ್ಲಿ ಸುರಿಯಿತ್ತಿರುವ ವರ್ಷಧಾರೆಯಿಂದಾಗಿ ಬೇಲೂರು, ಹಳೆಬೀಡು ಸೇರಿದಂತೆ ಪ್ರಮುಖ ಪ್ರವಾಸಿ ಕೇಂದ್ರ, ಯಾತ್ರಾಸ್ಥಳಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.
ಬೇಲೂರಿಂದ ದಕ್ಷಿಣ ಕನ್ನಡದ ಕಡೆ ಹೊರಡುವ ಪ್ರವಾಸಿಗರು ಅಲ್ಲಿಯೂ ಮಳೆಯಿಂದಾಗಿ ಬರುತ್ತಿಲ್ಲ.