ನುಗ್ಗೇಹಳ್ಳಿ: ನಿರ್ಮಲ ಗ್ರಾಮ ಯೋಜನೆಯ ಶೌಚಾಲಯ ನಿರ್ಮಾಣ ಮಾಡಿಕೊಂಡ ಫಲಾನುಭವಿಗಳಿಗೆ ಗ್ರಾಮ ಪಂ ಅಧಿಕಾರಿಗಳು ಲಂಚ ಪಡೆಯದೆ ಒಂದೇ ದಿನದಲ್ಲಿ ಚೆಕ್ ನೀಡಬೇಕು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಲ್ಲಿಗೆ ಸಮೀಪದ ಅಣತಿ ಗ್ರಾಮ ಪಂಚಾಯ್ತಿ ಆವರಣದಲ್ಲಿ ಇತ್ತೀಚೆಗೆ ನಡೆದ ಗ್ರಾಮ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಣತಿ ಗ್ರಾಪಂ ಶೌಚಾಲಯಗಳಿಗೆ 15 ಲಕ್ಷ ರು. ಬಿಡುಗಡೆ ಮಾಡಿಸುತ್ತೇನೆ. ಪಕ್ಷಭೇದ ಮರೆತು ರೈತರು ಶೌಚಾಲಯ ನಿರ್ಮಾಣ ಮಾಡಿಕೊಂಡರೆ ನೀವೆ ಹೋಗಿ ಪೋಟೋತೆಗೆದು ಚೆಕ್ ನೀಡಬೇಕೆಂದು ತಿಳಿಸಿದರು.
ಸಮುದಾಯ ಭವನ: ಕಾರೇಹಳ್ಳಿ, ಅಣತಿ, ಕೆಂಬಾಳಿಗೆ ಡಾಂಬರ್ ರಸ್ತೆ ವಳಗೇರಳ್ಳಿ ಕೋಡಿಹಳ್ಳಿಗೆ ಸಮುದಾಯ ಭವನ ಮಾಡಿಸುವ ಭರವಸೆ ನೀಡಿದರು.
ಗ್ರಾಪಂ ಮಾಜಿ ಅಧ್ಯಕ್ಷ ಎ.ಸಿ ನಾಗೇಶ್ ಮಾತನಾಡುತ್ತಾ ಹಳ್ಳಿಗಳಲ್ಲಿ ಹೆಚ್ಚು ಸಮಸ್ಸೆಗಳಿವೆ. ಗ್ರಾಮ ಸಭೆಗೆ ಅಧಿಕಾರಿಗಳು ಬರುತ್ತಿಲ್ಲ. ಈ ಬೇಜವಬ್ದಾರಿ ಬಗ್ಗೆ ಶಾಸಕರು ಗಮನ ಹರಿಸಬೇಕು ಎಂದರು.
ಹೇಮೆ ನೀರು ಹರಿಸಿ: ಅಣತಿ ದಿಗಂಬರೇಶ್ವರ ವಿದ್ಯಾ ಸಂಸ್ಥೆ ಅಧ್ಯಕ್ಷ ವೆಂಕಟೇಶ್ ಮಾತನಾಡಿ, ಜಿಲ್ಲೆಯಲ್ಲೆ ದೊಡ್ಡಕೆರೆಯಾದ ಅಣತಿ ಕೆರೆಗೆ ಹೇಮಾವತಿ ನೀರು ಹರಿಸಿ ತುಂಬಿಸ ಬೇಕೆಂದು ಶಾಸಕರಿಗೆ ಮನವಿ ಮಾಡಿದರು. ಜಿಪಂ ಸದಸ್ಯ ಶಿವಶಂಕರ್ ಕುಂಟೆ, ತಾಪಂ ಅಧ್ಯಕ್ಷೆ ಮಂಜುಳ ರಾಜು, ಗ್ರಾಪಂ ಅದ್ಯಕ್ಷೆ ಜಯಂತಿಕುಮಾರ್, ವಳಗೇರಹಳ್ಳಿ ಮಂಜುನಾಥ್, ಸಿದ್ದಣ್ಣ, ವಿ.ಆರ್. ರಾಮಚಂದ್ರು, ಕೃಷಿ ನಿರ್ದೇಶಕ ಮಲ್ಲೇಶ್ ಗೌಡ, ಜಲಾನಯನ ಅಧಿಕಾರಿ ಕೇಶವೇಗೌ, ಪುರುಷೋತ್ತಮ್, ಗ್ರಾಮ ಲೆಕ್ಕಾದಿಕಾರಿ ಮಂಜುನಾಥ್, ಆದರ್ಶ, ಪಿಡಿಒ ಶಿವಸ್ವಾಮಿ ಇದ್ದರು.