ರಾಮನಾಥಪುರ: ಬಾಂಧವ್ಯ ವಿವಿಧೋದ್ದೇಶ ಸಹಕಾರ ಸಂಘದ ಮೂಲಕ ಸಾರ್ವಜನಿಕರಿಗೆ ಉತ್ತಮ ಜನಪರ ಕೆಲಸಗಳನ್ನು ಮಾಡಿ ಎಂದು ಸೇವಾ ಸಂಸ್ಥೆಯ ನಿರ್ದೇಶಕ ಮಾರ್ಷಲ್ ಪಿಂಟೋ ಹೇಳಿದರು.
ರಾಮನಾಥಪುರ ಹತ್ತಿರವಿರುವ ಕೊಣನೂರು ಹೋಬಳಿಯ ಸಿಎಂಎಸ್ಎಸ್ಎಸ್ ಸೇವಾ ಸಂಸ್ಥೆಯ ಮಹಿಳಾ ಸಂಘದ ಸದಸ್ಯರು ಮರಿಯಾನಗರ ಗ್ರಾಮದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ನಿಯೋಜಿತ ಬಾಂಧವ್ಯ ವಿವಿಧೋದ್ದೇಶ ಸಹಕಾರ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೃಷಿ ಆಧಾರಿತ ಉದ್ಯೋಗವಾದಂತಹ ವಾಣಿಜ್ಯ ಬೆಳೆಗಳನ್ನು ಬೆಳೆದು ಸ್ವಾವಲಂಬಿಗಳಾಗಬೇಕೆಂದು ತಿಳಿಸಿದರು.
ಮರಿಯ ನಗರ ಧರ್ಮ ಕೇಂದ್ರದ ಗುರುಗಳಾದ ವಂದನೀಯ ಸ್ವಾಮಿ ಜಾನ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಕಾರ್ಯ ಚಟುವಟಿಕೆ ಸದಾ ಹರಿಯುವ ನೀರಂತೆ ಇರಬೇಕು. ಚಟುವಟಿಕೆಯನ್ನು ಉತ್ತಮ ಸೇವೆ ಎಂದು ಪರಿಗಣಿಸಿ ಸಹಕಾರ ಸಂಘ ನಿ. ಮುಂದುವರಿಯಲಿ ಎಂದರು.
ಸಿಎಂಎಸ್ಎಸ್ಎಸ್ ಸೇವಾ ಸಂಸ್ಥೆಯ ಕ್ಷೇತ್ರ ಸಂಯೋಜಕ ವಿನ್ಸೆಂಟ್ ಸಿಕ್ವೇರಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃಷಿ ಇಲಾಖೆಯ ಅನುವುಗಾರ ಪ್ರಭು ಪಿದೋಲೀಸ್, ಬಾಂಧವ್ಯ ಮಹಿಳಾ ಒಕ್ಕೂಟದ ಅಧ್ಯಕ್ಷೆ ಗೀತಾ ಶ್ರೀನಿವಾಸಮೂರ್ತಿ ತಾಪಂ ಸದಸ್ಯ ಜವರಮ್ಮ, ದಿವ್ಯ ಜ್ಯೋತಿ ಮಹಾ ಸಂಘದ ಅಧ್ಯಕ್ಷೆ ಸುಶೀಲ, ಬಾಂಧವ್ಯ ಮಹಿಳಾ ಒಕ್ಕೂಟದ ಕಾರ್ಯದರ್ಶಿ ಅಗತಮ್ಮ ಇದ್ದರು.
ಮಂಡಳಿಯ ಪದಾಧಿಕಾರಿಗಳು: ಗೀತಾ ಮುಖ್ಯ ಪ್ರವರ್ತ್ತಕರು, ಅಗತಮ್ಮ ಪ್ರವರ್ತಕರು, ಸೀತಮ್ಮ, ಚಂದ್ರಕಲ, ಮೀನಾಕ್ಷಿ, ಶಶಿಕಲ, ರೆಜಿನಾಮೇರಿ, ಅಂತೋಣಿ ಮೇರಿ, ಫಿಲೋಮಿನಾ, ಜಾನಕಮ್ಮ ಅವರನ್ನು ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾಯಿತು. ವಿಭಾಗೀಯ ಸಂಯೋಜಕ ಕೃಷ್ಣಶೆಟ್ಟಿ ಸ್ವಾಗತಿಸಿ, ರೆಜಿನಾಮೇರಿ ವಂದಿಸಿದರು.