ಸಕಲೇಶಪುರ: ತಾಲೂಕಿನಲ್ಲಿ ಕಳೆದ 24 ಗಂಟೆ ಅವಧಿಯಿಂದ ಸುರಿಯುತ್ತಿರುವ ಬಾರಿ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಮಂಗಳವಾರ ಮಧ್ಯಾಹ್ನದಿಂದ ಆರಂಭವಾದ ಧಾರಾಕಾರ ಮಳೆ ಬುಧವಾರ ಮಧ್ಯಾಹ್ನದವರಗೆ ಸುರಿದ ಪರಿಣಾಮ ಪಟ್ಟಣದ ಬೀದಿಗಳಲ್ಲಿ ಜನಸಂಚಾರ ವಿರಳವಾಗಿದ್ದು ಜನರು ಮನೆಬಿಟ್ಟು ಹೊರಬರಲು ಚಿಂತಿಸುವಂತೆಮಾಡಿದ್ದರೆ, ಗ್ರಾಮೀಣ ಜನರು ಕೃಷಿ ಕೆಲಸಗಳಿಗೆ ಸಂಪೂರ್ಣ ವಿರಾಮ ನೀಡಿದ್ದಾರೆ. 24 ಗಂಟೆ ಅವಧಿಯಲ್ಲಿ ಮಾರನಹಳ್ಳಿ ಗ್ರಾಮದಲ್ಲಿ ದಾಖಲೆಯ 220 ಮೀ.ಮೀ ಮಳೆಯಾಗಿದ್ದರೆ ಪಟ್ಟಣದಲ್ಲಿ 200 ಮೀ.ಮೀ ಮಳೆಯಾಗಿದ್ದು, ತಾಲೂಕಿನ ಬಹುತೇಕ ಹಳ್ಳ ಹಾಗೂ ನದಿಗಳು ಊಕ್ಕಿಹರಿದ ಪರಿಣಾಮ ಬಹುತೇಕ ಬತ್ತದ ಗದ್ದೆನಾಟಿ ಮಾಡಿದ ಪ್ರದೇಶ ನೀರು ಅವರಿಸಿದ್ದರೆ ನಾಟಿ ಮಡಿಗಳು ನೀರಿನಲ್ಲಿ ಮುಳುಗಿವೆ. ಹೇಮಾವತಿ ನದಿ ಇದೆ ಮೊದಲ ಬಾರಿಗೆ 10 ಅಡಿಯಷ್ಟು ನೀರು ಹರಿಯುತ್ತಿದ್ದು ಸಮೀಪದ ಭತ್ತದ ಗದ್ದೆಗಳಿಗೂ ನೀರು ವ್ಯಾಪಿಸಿದ್ದು ತಾಲೂಕಿನಲ್ಲಿ ಸರಾಸರಿಗಿಂತ 640 ಮೀ.ಮಿ ಅಧಿಕ ಮಳೆಯಾಗಿದ್ದು ಇದುವರಗೆ ತಾಲೂಕಿನಲ್ಲಿ 2910 ಮೀ.ಮೀನಷ್ಟು ಮಳೆಯಾಗಿದ್ದು ತಾಲೂಕಿನಲ್ಲಿ ಗುರುವಾರ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ.