ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

13ರವರೆಗೆ ಕುಷ್ಠರೋಗ ಪಾಕ್ಷಿಕ ದಿನಾಚಾರಣೆ

Rashmi Kasaragodu
Updated On : 2 Feb 2014, 12:45 pm

ಹಾಸನ: ಕುಷ್ಠರೋಗ ಪಾಕ್ಷಿಕ ದಿನಾಚರಣೆಯನ್ನು ಫೆ. 13ರವರೆಗೆ ಆಚರಿಸಲಾಗುತ್ತಿದೆ. ತಾಲೂಕು ಮಟ್ಟದ ಕಾರ್ಯಕ್ರಮವನ್ನು ನಗರದ ವಾಣಿವಿಲಾಸ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಜಾಥಾ ಕಾರ್ಯಕ್ರಮ ಗುರುವಾರ ಏರ್ಪಡಿಸಲಾಗಿತ್ತು. ಸಾರ್ವಜನಿಕರಿಗೆ ಈ ರೋಗದ ಬಗ್ಗೆ ಅರಿವು ಮೂಡಿಸಲು ಜಾಥಾ ಕಾರ್ಯಕ್ರಮವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ  ಡಾ. ಪಿ.ಎಲ್. ಶ್ಯಾಮಲಾದೇವಿ ಉದ್ಘಾಟಿಸಿದರು,  ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಎಂ.ಸಿ ಹೇಮಲತಾ ಇದ್ದರು. ಆರೋಗ್ಯ ಇಲಾಖೆಯ ಸಿಬ್ಬಂದಿವರ್ಗ ಜಾಥಾದಲ್ಲಿ ಭಾಗವಹಿಸಿ, ಹೆಚ್ಚಿನ ಅರಿವು ಮೂಡಿಸಲು ಪ್ರಯತ್ನಿಸಿದರು. ಮೆರವಣಿಗೆಯಲ್ಲಿ ಕರಪತ್ರ ಹಂಚಲಾಯಿತು. ಹೇಮಾವತಿ ಪ್ರತಿಮೆ ಮಾರ್ಗವಾಗಿ ಹಾದು ಹೋದ ಜಾಥಾ ಎನ್. ಆರ್. ಸರ್ಕಲ್‌ನಿಂದ ವಾಪಸ್ಸು ವಾಣಿವಿಲಾಸ ತಲುಪಿತು. ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಎಸ್. ಮಹೇಶ್ ನಿರೂಪಿಸಿದರು.


ಸೇವಾ ಮನೋಭಾವ ಬೆಳೆಸಿಕೊಳ್ಳಲು ಕರೆ

ಅರಕಲಗೂಡು: ಜನರು ಉಳಿತಾಯ ಮಾಡುವ ಪ್ರಕ್ರಿಯೆಯ ಜೊತೆಗೆ ಸೇವಾ ಮನೋಭಾವ ಬೆಳೆಸಿಕೊಂಡಲ್ಲಿ ಬದುಕು ಹಸನಾಗಲು ಸಾಧ್ಯ ಎಂದು ಇಲ್ಲಿನ ಕರ್ಣಾಟಕ ಬ್ಯಾಂಕ್‌ನ ವ್ಯವಸ್ಥಾಪಕ ಜಯಾನಂದ್ ದೇವಾಡಿಗ ತಿಳಿಸಿದ್ದಾರೆ. ಅವರು ಕಸಬಾ ಹೋಬಳಿ ಹೊನ್ನವಳ್ಳಿ ಗ್ರಾಮದ ಜೈ ಹನುಮಾನ್ ನವ ಸಾಕ್ಷರ ಪುರುಷ ಸ್ವಸಹಾಯ ಸಂಘದ 10ನೇ ವಾರ್ಷಿಕೋತ್ಸವ ಸಮಾರಂಭದಅಧ್ಯಕ್ಷತೆ ವಹಿಸಿ ಮಾತನಾದರು.
 ಪ್ರಸ್ತುತ ಸ್ವ- ಸಹಾಯ ಸಂಘಗಳ ಮೂಲಕ ಗ್ರಾಮೀಣ ಭಾಗದ ಜನರು ಕ್ರಿಯಾಶೀಲರಾಗಿದ್ದು,ಉಳಿತಾಯ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದರ ಜೊತೆಗೆ, ಎಲ್ಲರಿಗಾಗಿ ನಾನು, ನನಗಾಗಿ ಎಲ್ಲರೂ ಎಂಬ ಧ್ಯೇಯದೊಂದಿಗೆ ಎಲ್ಲ ಸದಸ್ಯರಿಗೂ ಸಹಕಾರಿಯಾಗಿ ಇರುವುದು ಶ್ಲಾಘನೀಯ ಎಂದರು.
ಸದರಿ ಸಂಘ ಸುಮಾರು 10 ವರ್ಷಗಳಿಂದ ಸುಮಾರು 10 ವರ್ಷಗಳಿಂದ ದಾಖಲಾತಿಗಳನ್ನು ಉತ್ತಮವಾಗಿ ನಿರ್ವಹಣೆ ಮಾಡಿಕೊಂಡು ಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement