ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಇಂದು ಹಳೇಬೀಡಿನಲ್ಲಿ ಮಸ್ತಾಕಾಭಿಷೇಕ ಕಾರ್ಯಕ್ರಮ

Rashmi Kasaragodu
Updated On : 2 Feb 2014, 12:46 pm

ಹಳೇಬೀಡು: ಹಳೇಬೀಡಿನಲ್ಲಿ 1008 ಭಗವಾನ್ ಶ್ರೀ ಶಾಂತಿನಾಥ ತೀರ್ಥಂಕರರ ಮಸ್ತಕಾಭಿಷೇಕ ಪೂಜಾ ಮಹೋತ್ಸವವನ್ನು ಫೆ. 2ರಂದು ಹಮ್ಮಿಕೊಳ್ಳಲಾಗಿದೆ. ಶ್ರೀ ಹಾಸನ ಜೈನ ಸಂಘ, ದಿಗಂಬರ ಜೈನ ಯುವಕರ ಸಂಘ ಹಾಗೂ ಸಮಸ್ತ ಜೈನ ಸಮಾಜದ ಆಶ್ರಯದಲ್ಲಿ ಹಮ್ಮಿಕೊಂಡಿರುವ ಈ ಪೂಜೆಯ  ಸಾನಿಧ್ಯವನ್ನು ಶ್ರೀಕ್ಷೇತ್ರ ಕನಕಗಿರಿಯ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ವಹಿಸುವರು.  ಬೆಳಗ್ಗೆ 7ಕ್ಕೆ ಭಗವಾನ್ ಶ್ರೀ ಆದಿನಾಥ ತೀರ್ಥಂಕರರಿಗೆ ಮತ್ತು ಭಗವಾನನ್ಶ್ರೀ  ವಿಜಯ ಪಾರ್ಶ್ವನಾಥ ತೀರ್ಥಂಕರರಿಗೆ ಪಂಚಾಮೃತಪೂಜೆ, 9.30ಕ್ಕೆ ಸ್ವಾಮೀಜಿಯವರ ಸ್ವಾಗತ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ಶ್ರೀಗಳಿಂದ  ಆಶೀರ್ವಚನ ನಡೆಯಲಿದೆ. ಮಧ್ಯಾಹ್ನ 12ಕ್ಕೆ 1008 ಭಗವಾನ್ ಶ್ರೀ ಶಾಂತಿನಾಥ ತೀರ್ಥಂಕರರಿಗೆ ಮಸ್ತಕಾಭಿಷೇಕ ನಡೆಯಲಿದೆ. ಮಸ್ತಕಾಭಿಷೇಕದಲ್ಲಿ ನಾರಿಕೇಳ (ಎಳನೀರು), ಕಬ್ಬಿನ ಹಾಲು, ಕ್ಷೀರಾಭಿಷೇಕ,  ಕಲ್ಕಚೂರ್ಣ (ಅಕ್ಕಿಹಿಟ್ಟು), ಅರಿಶಿಣ, ಕಷಾಯ, ಚತುಷ್ಕೋನ ಕಲಶ, ಅಷ್ಟಗಂಧ, ಶ್ರೀಗಂಧ, ಚಂದನ, ಪುಷ್ಪವೃಷ್ಟಿ, ಕನಕಾಭಿಷೇಕ, ಪೂರ್ಣಕುಂಭ (ಮಹಾಶಾಂತಿಧಾರ ಕಳಸ), ಮಹಾಮಂಗಳಾರತಿ ನೆರವೇರಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement