'ಕುಷ್ಠರೋಗದ ಅಂಗವಿಕಲತೆ ತಡೆಯಬಹುದು'
ಬೇಲೂರು: ರೋಗ ಪತ್ತೆ ಮತ್ತು ಕ್ರಮ ಬದ್ಧವಾದ ಎಂಡಿಟಿ ಚಿಕಿತ್ಸೆಯಿಂದ ಕುಷ್ಠರೋಗದಿಂದಾಗುವ ಅಂಗವಿಕಲತೆಯನ್ನು ತಡೆಯಬಹುದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಸಂಧ್ಯಾ ತಿಳಿಸಿದರು. ಪಟ್ಟಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟೀಯ ಕುಷ್ಠರೋಗ ಮಾಸಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕುಷ್ಠರೋಗ ಇತರೆ ಕಾಯಿಲೆಗಳಂತೆ ಒಂದು ಸಾಮಾನ್ಯ ಖಾಯಿಲೆ ಈ ರೋಗವು ಚರ್ಮ ಮತ್ತು ನರಗಳಿಗೆ ಸಂಬಂಧಿಸಿದ ಖಾಯಿಲೆಯಾಗಿದ್ದು, ಇದು ಸಾಂಕ್ರಾಮಿಕ ರೋಗ. ಇದರಿಂದ ಕ್ರಮಬದ್ಧ ಔಷಧಿ ಹಾಗೂ ಚಿಕಿತ್ಸೆಯಿಂದ ಸಂಪೂರ್ಣ ಗುಣವಾಗಲಿದೆ ಎಂದು ವಿವರಿಸಿದರು. ಯಾವುದೇ ವ್ಯಕ್ತಿಯ ಮೈ ಮೇಲೆ ಯಾವುದೆ ರೀತಿಯ ಮಚ್ಚೆಗಳು ಕಂಡು ಬಂದರೆ ಹತ್ತಿರದ ಸರ್ಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷಿಸಿಕೊಳ್ಳುವಂತೆ ಮನವಿ ಮಾಡಿದರು. ಆರೋಗ್ಯ ಸಹಾಯಕ ಸಂಘದ ಅಧ್ಯಕ್ಷ ಹಕ್ಯಣ್ಣಕುಮಾರ್ ಮಾತನಾಡಿದರು.