ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮದ್ಯಪಾನ ದೊಡ್ಡ ಪಿಡುಗು: ಶಿವಣ್ಣ ವಿಷಾದ

Rashmi Kasaragodu
Updated On : 2 Feb 2014, 12:46 pm

ಹಾಸನ: ಮದ್ಯಪಾನ ಈ ದೇಶಕ್ಕೆ ಅಂಟಿರುವ ಬಹುದೊಡ್ಡ ಪಿಡುಗು. ಇದರಿಂದ ಮುಕ್ತವಾಗದ ಹೊರತು ಸಮಗ್ರ ಅಭಿವೃದ್ಧಿ ಅಸಾಧ್ಯ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಂ. ಶಿವಣ್ಣ ಅಭಿಪ್ರಾಯಪಟ್ಟರು. ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಇಲಾಖೆ ವತಿಯಿಂದ ಮುಟ್ನಳ್ಳಿ ಗ್ರಾಮದ ಸಮುದಾಯ ಭವನದಲ್ಲಿ ಇತ್ತೀಚೆಗೆ ಏರ್ಪಡಿಸಲಾಗಿದ್ದ ಮದ್ಯಪಾನದ ದುಷ್ಪರಿಣಾಮಗಳ ಕುರಿತ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮದ್ಯಪಾನ ವ್ಯಕ್ತಿತ್ವವನ್ನು ಸಂಪೂರ್ಣವಾಗಿ ನಾಶ ಮಾಡುವ ನಿಧಾನಗತಿಯ ವಿಷ ಎಂದರು. ಮದ್ಯವ್ಯಸನಕ್ಕೆ ದಾಸರಾಗುವವರು ಆರ್ಥಿಕವಾಗಿ ಸಂಕಷ್ಟಕ್ಕೆ ಗುರಿಯಾಗುವುದರ ಜತೆಗೆ ಸಾಮಾಜಿಕ ಬದುಕು ಕಳೆದುಕೊಳ್ಳುತ್ತಾರೆ. ಕುಟುಂಬವನ್ನು ನರಕಕ್ಕೆ ತಳ್ಳುತ್ತಾರೆ. ಶಾರೀರಿಕವಾಗಿಯೂ ದುಸ್ಥಿತಿಗೆ ತಲುಪುತ್ತಾರೆ. ಇದು ವೈಯಕ್ತಿಕ ಜೀವನ ಹಾಳುಮಾಡುವುದರ ಜೊತೆಗೆ ರಾಷ್ಟ್ರದ ಅಭ್ಯದಯಕ್ಕೆ ಧಕ್ಕೆ ತರುತ್ತದೆ ಎಂದು ಹೇಳಿದರು. ಬೆಂಕಿ ಕೇವಲ ದೇಹವನ್ನು ನಾಶ ಮಾಡಿದರೆ ಕುಡಿತ ದೇಹ ಮತ್ತು ಆತ್ಮಗಳೆರಡನ್ನೂ ನಾಶ ಮಾಡುತ್ತದೆ ಎಂದು ಮಹಾತ್ಮಗಾಂಧೀಜಿಯವರು ತಿಳಿಸಿದ್ದಾರೆ. ಯುವ ಜನತೆ ದುಶ್ಚಟಗಳಿಗೆ ದಾಸರಾಗದೆ ಗಾಂಧೀಜಿಯವರ ಸಂದೇಶಗಳನ್ನು ಅರಿತು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಬೇಕು ಎಂದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement