ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕಿಡ್ನಿ ವೈಫಲ್ಯ ರೋಗಿಗಳ ನೆರವಿಗೆ ಡಿಸಿಗೆ ಮನವಿ

Rashmi Kasaragodu
Updated On : 3 Feb 2014, 12:46 pm

ಹಾಸನ: ಕಿಡ್ನಿ ವೈಪಲ್ಯದಿಂದ ಬಳಲುತ್ತಿರುವ ರೋಗಿಗಳಿಗೆ ಸರ್ಕಾರ ನಾನಾ ಸೌಕರ್ಯ ಕಲ್ಪಿಸಿಕೊಡುವಂತೆ ಆಗ್ರಹಿಸಿ ಮಾನಸ ಮಹಿಳೆಯರ ಸ್ವ- ಉದ್ಯೋಗ ತರಬೇತಿ ಸಂಸ್ಥೆಯ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಶುಕ್ರವಾರ ಮನವಿ ನೀಡಿದರು. ರಾಜ್ಯಾದ್ಯಂತ ಸಾವಿರಾರು ಜನರು ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ರೋಗಿಗಳು ಇದ್ದಾರೆ. ಕಿಡ್ನಿ ವೈಪಲ್ಯ ಸಂಪೂರ್ಣ ಗುಣಪಡಿಸಲು ಆಗದ ಕಾಯಿಲೆ ಆಗಿದ್ದು, ಡಯಾಲಿಸಿಸ್ ಇವರ ಜೀವನ ಕಾಲವನ್ನು ಮಾತ್ರ ಸಾಧ್ಯವಿರುತ್ತದೆ. ಚಿಕಿತ್ಸೆ ಮತ್ತು ಇದರ ಔಷಧಗಳು ಬಹಳ ದುಬಾರಿಯಾಗಿರುವುದಲ್ಲದೆ ಕಿಡ್ನಿ ವೈಫಲ್ಯದ ರೋಗಿಗಳು ದೈಹಿಕವಾಗಿ ಅಶಕ್ತರಾಗಿದ್ದಾರೆ. ಸಾಧಾರಣವಾಗಿ ದುಡಿಮೆ ಮಾಡಲು ಸಹ ಅಸಮರ್ಥರಾಗಿದ್ದಾರೆ.
ವಿಕಲಚೇತನರೆಂದು ಪರಿಗಣಿಸಿ: ಕಿಡ್ನಿ ವೈಫಲ್ಯದ ರೋಗಿಗಳಿಗೆ ಉಚಿತ ಬಸ್ ಹಾಗೂ ರೈಲ್ವೆ ಪಾಸ್ ನೀಡಬೇಕು. ಈ ರೋಗಿಗಳಿಗೆ ಜೀವನ ನಿರ್ವಹಣೆಗೆ ಮಾಸಿಕ ಧನ ಸಹಾಯ ಕೊಡಿಸಬೇಕು. ಕಿಡ್ನಿ ವೈಫಲ್ಯದ ರೋಗಿಗಳು ಅವರ ಜೀವಿತ ಕಾಲದಲ್ಲಿ ಬಹಳಷ್ಟು ಖರ್ಚು ಭರಿಸಬೇಕಾಗಿದ್ದು, ಅಕಾಲಿಕ ಮರಣವಾದಲ್ಲಿ ಅವರ ಕುಟುಂಬ ವರ್ಗದವರಿಗೆ (ವಿಮಾ ಮಾದರಿಯಲ್ಲಿ) ಪರಿಹಾರವನ್ನು ನೀಡಬೇಕು. ಕಿಡ್ನಿ ವೈಫಲ್ಯದ ರೋಗಿಗಳನ್ನು ವಿಕಲ ಚೇತನರೆಂದು ಪರಿಗಣಸಬೇಕು.
ಒತ್ತಾಯ: ಡಯಾಲಿಸಿಸ್ ತಜ್ಞ ವೈದ್ಯರು ಹಾಗೂ ಡಯಾಲಿಸಿಸ್ ಟೆಕ್ನಿಷಿಯನ್ ತಾಂತ್ರಿಕ ತಜ್ಞರು ಅವಶ್ಯಕತೆ ಇರುವುದರಿಂದ ಕೂಡಲೇ ಅವರನ್ನು ಉದ್ಯೋಗಕ್ಕೆ ನೇಮಿಸಬೇಕು. ಹೆಮೋಗ್ಲೋಬಿನ್ ಚುಚ್ಚುಮದ್ದು ಸೇರಿದಂತೆ ಡಯಾಲಿಸಿಸ್ ರೋಗಿಗಳ ಔಷಧ ಹಾಗೂ ವೈದ್ಯಕೀಯ ಉಪಚಾರಗಳ ಬೆಲೆ ಆದಷ್ಟು ಕಡಿಮೆಗೊಳಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮಾನಸ ಮಹಿಳಾ ಸ್ವ ಉದ್ಯೋಗ ಸಂಸ್ಥೆಯ ಸಂಚಾಲಕ ಕಡೂರು ದೇವೇಂದ್ರ ಹಾಗೂ ಇತರರು ಈ ಸಂದರ್ಭದಲ್ಲಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement