ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ಕೃಷಿ ಜೊತೆಗೆ ಉಪ ಕಸಬು ಇರಲಿ'

Rashmi Kasaragodu
Updated On : 3 Feb 2014, 12:41 pm

ಬೇಲೂರು: ರೈತಾಪಿ ವರ್ಗ ಕೃಷಿಯ ಜೊತೆಯಲ್ಲಿ ಉಪಕಸಬುಗಳನ್ನು ಅಳವಡಿಸಿಕೊಂಡಾಗ ಬದುಕು ಸುಲಭವಾಗುತ್ತದೆ ಎಂದು ತಾಪಂ ಮಾಜಿ ಅಧ್ಯಕ್ಷೆ ಕಮಲಾಚನ್ನಪ್ಪ ಕಿವಿಮಾತು ಹೇಳಿದರು.
ತಾಲೂಕಿನ ಕಸಗೋಡು ಗ್ರಾಮದ ಪ್ರಾಥಮಿಕ ಶಾಲಾ ಆವರಣದಲ್ಲಿ  ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಭಾಗ ಪ್ರಗತಿ ಬಂಧು ಸ್ವ-ಸಹಾಯ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆ ಹೂವು ಕಟ್ಟವದು, ಹೈನುಗಾರಿಕೆ, ನಾನಾ ಖಾದ್ಯಗಳ ತಯಾರಿಕೆ ಹೀಗೆ ಹತ್ತು  ಹಲವು ಬಗೆಯಲ್ಲಿ ಉಪಕಸಬುಗಳನ್ನು ಮಾಡಿದಾಗ ಮಾತ್ರ ಕುಟುಂಬದ ನಿರ್ವಹಣೆ  ಸಾಧ್ಯವಾಗುತ್ತದೆ ಎಂದರು. ಯೋಜನಾಧಿಕಾರಿ ಅಜಿತ್ ಹೆಗಡೆ ಮಾತನಾಡಿ, ರಾಜ್ಯದ 23 ಜಿಲ್ಲೆಗಳಲ್ಲಿ ಸಂಸ್ಥೆ ತನ್ನ ಸೇವಾ ಕಾರ್ಯ ಆರಂಭಿಸಿದೆ, ಕೆವಲ ಉಳಿತಾಯ ಮಾತ್ರವಲ್ಲದೆ, ಗ್ರಾಮಗಳ ಸ್ವಚ್ಛತೆ, ಆರೋಗ್ಯ, ಶೌಚಾಲಯಗಳ ಬಳಕೆ, ಸ್ವಂತ ಉದ್ಯೋಗದ ತರಬೇತಿ ಹೀಗೆ ಹಲವು ಬಗೆಯಲ್ಲಿ ಅರಿವು ಮೂಡಿಸುವ ಹಾಗೂ ಅತ್ಮವಿಶ್ವಾಸ ಮೂಡಿಸುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.  ಕಣತೂರು ವಲಯ ಅಧಿಕಾರಿ ಸೋಮಶೇಖರ್, ಸೇವಾ  ಪ್ರತಿನಿಧಿ ಮಿನಾಕ್ಷಿ, ಸರ್ಕಾರಿ ಶಾಲಾ ಮುಖ್ಯ  ಶಿಕ್ಷಕ ಜಯಣ್ಣ ಎನ್.ಜಿ, ಗ್ರಂಥಪಾಲಕ ಜಗದೀಶ್, ರೇಣುಕೇಶ್, ಈ.ಆರ್.ಓಂಕರ್ ಪಟೇಲ್, ಐ.ಸಿ.ಲಿಂಗರಾಜಾಚಾರ್, ಭಾವನಿ, ಗ್ರಾಮಸ್ಥರು ಹಾಗೂ  ಸಂಘದ ಪದಾಧಿಕಾರಿಗಳ ಇದ್ದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement