ನಾಳೆ ರಸಗ್ರಹಣ ಸಾಂಸ್ಕೃತಿಕ ಕಾರ್ಯಕ್ರಮ
ಸಕಲೇಶಪುರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಾಸನ ಹಾಗೂ ಸರ್ಕಾರಿ ಬಾಲಕಿಯರ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಫೆ.4 ರಂದು ಬೆಳಗ್ಗೆ 9.30ಕ್ಕೆ ರಸಗ್ರಹಣ ಕಾರ್ಯಕ್ರಮ ನಿಮಿತ್ತ ಕಾಲೇಜು ಆವರಣದಲ್ಲಿ ಎ.ಎಸ್. ಗಾಯತ್ರಿ ಮತ್ತು ತಂಡದವರಿಂದ ವಚನ ಸಾಹಿತ್ಯ, ಪ್ರಾತ್ಯಕ್ಷಿಕೆ, ವಚನ ಗಾಯನ ನಡೆಯಲಿದೆ. ಪುರಸಭೆ ಅಧ್ಯಕ್ಷ ಎಸ್.ಎನ್. ಸತೀಶ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಪ್ರಾಂಶುಪಾಲರಾದ ಕೆ.ಬಿ. ಅನಂತರಾಜು ಅಧ್ಯಕ್ಷತೆ ವಹಿಸುವರು. ಆಲೂರು ತಾಲೂಕಿನ ಸಾಹಿತಿ ಕೊಟ್ರೇಶ್ ಎಸ್. ಉಪ್ಪಾರ್ ಉಪನ್ಯಾಸ ನೀಡುವರು. ಅಖಿಲ ಭಾರತ ವಚನ ಸಾಹಿತ್ಯ ಪರಿಷತ್ ಅಧ್ಯಕ್ಷ ತಿ. ರಾಮಕೃಷ್ಣಯ್ಯ, ಪುರಸಭೆ ಸದಸ್ಯ ಕೆ.ಎಂ. ವೆಂಕಟೇಶ್ ಇತರರು ಭಾಗವಹಿಸುವರು.