ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ರಾಷ್ಟ್ರಮಟ್ಟದಲ್ಲಿ ಕ್ರೀಡೆಗೆ ಪ್ರೋತ್ಸಾಹ ಅಧಿಕವಾಗಲಿ'

Rashmi Kasaragodu
Updated On : 3 Feb 2014, 12:42 pm

ಹಾಸನ: ಮೈಸೂರು ವಿಶ್ವ ವಿದ್ಯಾಲಯ ದೈಹಿಕ ಶಿಕ್ಷಣ ವಿಭಾಗ ಮತ್ತು ಎ.ವಿ.ಕಾಂತಮ್ಮ ಮಹಿಳಾ ಕಾಲೇಜಿನ ಆಶ್ರಯದಲ್ಲಿ ಇತ್ತೀಚೆಗೆ ಮಲೆನಾಡು ವಲಯ ಮಟ್ಟದ ಮಹಿಳಾ ಕ್ರೀಡಾ ಕೂಟವನ್ನು ಎ.ವಿ.ಕಾಂತಮ್ಮ ಮಹಿಳಾ ಕಾಲೇಜಿನಲ್ಲಿ ಏರ್ಪಡಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿದ  ಪ್ರಾಂಶುಪಾಲೆ  ಡಾ.ಜೆ.ಶೈಲಜಾಕುಮಾರಿ ಮಾತನಾಡಿ, ಕ್ರೀಡೆ ಮನುಷ್ಯನಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಲು ಅವಕಾಶ ನೀಡುತ್ತಿದೆ. ಆದರೂ ರಾಷ್ಟ್ರಮಟ್ಟದಲ್ಲಿ ಕ್ರೀಡೆಗೆ ಕೊಡುತ್ತಿರುವ ಪ್ರೋತ್ಸಾಹ ಶೆ.10ರಷ್ಟು ಮಾತ್ರ ಕೆಲವೇ ಕೆಲವು ಕ್ರೀಡೆಗಳಿಗೆ ಮಾತ್ರ ಪ್ರೋತ್ಸಾಹ ದೊರಕುತ್ತಿದೆ. ಕೆಲಮೊಂದು ಕ್ರೀಡೆಗಳು ಮೂಲೆ ಗುಂಪಾಗಿವೆ. ಅದರಲ್ಲೂ ಮಹಿಳೆಯರು ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದು ಅತ್ಯಂತ ಕಡಿಮೆ ಇದಕ್ಕೆ ಪೋಷಕರ ತಪ್ಪು ಗ್ರಹಿಕೆಯೇ ಕಾರಣವಾಗಿದೆ ಎಂದರು. ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿನಿಯರು, ವಲಯ ಮಟ್ಟದ ಸಂಚಾಲಕ  ಮಹೇಂದ್ರ ಕುಮಾರ್ ಹಾಗೂ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕಿ ಸಿ.ಎಸ್.ಹೇಮಲತ ಮತ್ತಿತರರು ಇದ್ದರು. ಗಾಮಿನಿ ಪ್ರಾರ್ಥಿಸಿದರು. ಜೀವಿತಾ ಸ್ವಾಗತಿಸಿದರು. ಸೌಮ್ಯ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement