ಲೋಕ ಚುನಾವಣೇಲಿ ಬಿಜೆಪಿಗೆ ಜಯ'
ಹಾಸನ: ಜಿಲ್ಲೆಯ ಮತದಾರರು ಬುದ್ದಿವಂತರು ಹಾಗಾಗಿ, ಈ ಬಾರಿಯ ಲೋಕಸಭಾ ಚುವಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸುತ್ತಾರೆ. ಪಕ್ಷ ಅವಕಾಶ ನೀಡಿದರೆ ಸ್ಪರ್ಧೆಗೆ ನಾನೂ ಸಿದ್ಧ ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಜೈಮಾರುತಿ ದೇವರಾಜ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಮೂಲಭೂತ ಸಮಸ್ಯೆಗಳಿಂದ ತತ್ತರಿಸುತ್ತಿರುವ ಹಾಸನ ಜಿಲ್ಲೆಗೆ ಜನಪರವಾಗಿ ದುಡಿಯುವ, ಸಾಮಾನ್ಯನ ಕೈಗೆ ಸಿಗುವ ವ್ಯಕ್ತಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜನರಿಂದ ಆಯ್ಕೆ ಯಾಗಬೇಕು ಎಂದು ಹೇಳಿದರು. ಮೋದಿ ಅಲೆ ಎಲ್ಲಡೆ ಇದೆ.
ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಪಕ್ಷಕ್ಕೆ ಮತನೀಡಿದರೆ ಮಾತ್ರ ಸಮಸ್ಯೆ ಪರಿಹಾರವಾಗುತ್ತದೆ ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಜೈಮಾರುತಿ ದೇವರಾಜ್ ಅಭಿಪ್ರಾಯಪಟ್ಟರು.