ಸಾಹಿತ್ಯ ಗೋಷ್ಠಿ
ಬೇಲೂರು: ವೇಲಾಪುರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಹಾಗೂ ತಾಲೂಕು ಅಂಗವಿಕಲರ ಅಭ್ಯುದಯ ಸಂಘ ಇವರ ಪ್ರಾಯೋಜಕತ್ವದಲ್ಲಿ ಇತ್ತೀಚೆಗೆ ನಡೆದ 16ನೇ ತಿಂಗಳ ಮನೆ ಮನೆ ಸಾಹಿತ್ಯ ಗೋಷ್ಠಿಯ ಉಪನ್ಯಾಸ, ಸ್ವರಚಿತ ಕವನ ವಾಚನ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ತಾಲೂಕು ಅಭ್ಯುದಯ ಸಂಘದ ಅಧ್ಯಕ್ಷ ಬಿ.ವಿ. ಉಮೇಶ್. ತಾಲೂಕು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಇಂದಿರಮ್ಮ, ಗೌರವ ಕಾರ್ಯದರ್ಶಿ ಮ. ಶಿವಮೂರ್ತಿ, ಉದ್ಯಮಿ ಬಿ.ಎಸ್. ಪ್ರಕಾಶ್, ನಿವೃತ್ತ ಶಿಕ್ಷಕಿ ವನಜಾಕ್ಷಮ್ಮ, ಸಾಹಿತಿ ಬೇಲೂರು ಕೃಷ್ಣಮೂರ್ತಿ ಹಾಗೂ ಇತರರು ಇದ್ದರು. ತಾಲೂಕು ಕಲಾವಿದರ ಸಂಘದಿಂದ ದೇಶಭಕ್ತಿ ಹಾಗೂ ಭಾವಗೀತೆ ಕಾರ್ಯಕ್ರಮ ನಡೆಯಿತು.