ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ವಧು- ವರರಿಗೆ ಪ್ರೋತ್ಸಾಹ ಧನ

Rashmi Kasaragodu
Updated On : 4 Feb 2014, 1:23 am

ಅರಸೀಕೆರೆ: 2013-14ನೇ ಸಾಲಿನ ಪ. ಜಾತಿ ಮತ್ತು ಪ.ಪಂಗಡದ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಣೆ ಹಾಗೂ ಅಂತರ್ಜಾತಿ ವಿವಾಹವಾದ ನೂತನ ವಧು-ವರರಿಗೆ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರೋತ್ಸಾಹಧನ ವಿತರಿಸಲಾಯಿತು. ತಾಲೂಕು ಪಂಚಾಯ್ತಿ  ವ್ಯಾಪ್ತಿಯ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಏರ್ಪಡಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಶಾಸಕ ಕೆ.ಎಂ. ಶಿವಲಿಂಗೇಗೌಡ ಹಾಗೂ ತಾಪಂ ಅಧ್ಯಕ್ಷ ಹೆಚ್.ಟಿ. ಶಿವಮೂರ್ತಿ, ಪರಿಶಿಷ್ಟ ಜಾತಿಯ 32 ಹಾಗೂ ಪರಿಶಿಷ್ಟ ಪಂಗಡದ 8 ಮಂದಿ ಮಹಿಳೆಯರಿಗೆ ಯಂತ್ರ ವಿತರಿಸಿದರೆ, ಅಂತರ್ಜಾತಿ ವಿವಾಹವಾದ 12 ಮಂದಿ ಫಲಾನುಭವಿಗಳಿಗೆ 25 ಸಾವಿರ ರು. ಚೆಕ್ಕನ್ನು ಮೊದಲ ಕಂತಿನಲ್ಲಿ ನೀಡಲಾಯಿತು.
ಇದೇ ವೇಳೆ ಮಾತನಾಡಿದ ಉಭಯ ಮುಖಂಡರು ಸರ್ಕಾರದ ಸವಲತ್ತುಗಳನ್ನು ಸದ್ಭಳಕೆ ಮಾಡಿಕೊಂಡು ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಬೇಕೆಂದು ಕರೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement