ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಕ್ಕೆ ರೈತ ಸಂಘ ಆಗ್ರಹ

Rashmi Kasaragodu
Updated On : 4 Feb 2014, 1:22 am

ಹಾರನಹಳ್ಳಿ: ತಾಲೂಕಿನಲ್ಲಿ ತೆಂಗು ಸೇರಿದಂತೆ ಇತರ ಬೆಳೆಗಳು ಸಂಪೂರ್ಣ ನಾಶವಾಗಿದ್ದು,  ತಾಲೂಕಿನ ಕೆರೆಗಳಿಗೆ ಶಾಶ್ವತ ನೀರಾವರಿ ಯೋಜನೆಯನ್ನು  ಜಲಸಂಪನ್ಮೂಲ ಇಲಾಖೆ ಸಚಿವ ಶಿವರಾಜ್ ತಂಗಡಗಿ ಹಾಗೂ ಬೃಹತ್ ನೀರಾವರಿ ಸಚಿವ  ಎಂ.ಬಿ.ಪಾಟೀಲ್ ಅವರು ಅನುಷ್ಟಾನಕ್ಕೆ ತರಲು ಮುಂದಾಗಬೇಕೆಂದು ರೈತ ಸಂಘದ ಜಿಲ್ಲಾ ಸಂಚಾಲಕ ಕನಕಂಚೇನಹಳ್ಳಿ ಪ್ರಸನ್ನಕುಮಾರ್ ಒತ್ತಾಯಿಸಿದ್ದಾರೆ.
ಇತ್ತೀಚೆಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಗಚಿ ಜಲಾಶಯದಿಂದ  ಹಾರನಹಳ್ಳಿ ಕೆರೆಗೆ ನೀರು ತುಂಬಿಸುವ ಯೋಜನೆಯ ಬಗ್ಗೆ ಸಣ್ಣ ನೀರಾವರಿ ಇಲಾಖೆ, ಅರಸೀಕೆರೆ ಪ್ರಾಥಮಿಕ ವರದಿ ನೀಡಿದ್ದು ಬೇಲೂರು ತಾಲ್ಲೂಕು ಯರೇಹಳ್ಳಿಯ ಬಳಿ ಯಗಚಿ ಜಲಾಶಯದಿಂದ ಮತ್ತು ಬೇಲೂರು ತಾಲ್ಲೂಕು ಕರಘಡ ಊರಿನ ಎರಡೂ ಪ್ರದೇಶಗಳು ಸಮತಟ್ಟ ಜಾಗದಲ್ಲಿರುವುದರಿಂದ 6 ಕಿ.ಮೀ. ಸುರಂಗ ಮಾರ್ಗವನ್ನು ನಿರ್ಮಿಸಿದಲ್ಲಿ ್ಲ ಹೆಚ್ಚುವರಿ ನೀರನ್ನು ಅರಸೀಕೆರೆ ತಾಲ್ಲೂಕಿಗೆ ಉಪಯೋಗಿಸಿಕೊಳ್ಳಬಹುದಾಗಿದೆ. ಅರಸೀಕೆರೆ ತಾಲೂಕಿನಲ್ಲಿ 34 ಕೆರೆಗಳಿದ್ದು ಸದರಿ ಕೆರೆಗಳ ಸಾಮರ್ಥ್ಯವು 1569-14 ಎಂ.ಸಿ.ಎಫ್.ಟಿ. ಆಗಿದೆ. ಈ ಕೆರೆಗಳಿಗೆ ಕರಗಢ ಊರಿನಿಂದ ಗುರುತ್ವಾಕರ್ಷಣೆ ಮೂಲಕ ಕೆರೆಗಳಿಗೆ ನೀರು ಹರಿಸಬಹುದಾಗಿದೆ ಎಂದು ಹೇಳಿದ್ದಾರೆ.
ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸಣ್ಣ ನೀರಾವರಿ ಇಲಾಖೆ ಹಾಸನ ಇವರಿಗೆ ವರದಿ ಸಲ್ಲಿಸಲಾಗಿದೆ ಎಂದುತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement